ಭಾರತದಲ್ಲಿ ಹೊಸದಾಗಿ 2.85 ಲಕ್ಷ ಕೋವಿಡ್-19 ಪ್ರಕರಣಗಳು ದಾಖಲು; ಧನಾತ್ಮಕ ದರ 16.16%ರಷ್ಟು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2.85 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ದೇಶಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ 4 ಕೋಟಿಗಿಂತ ಹೆಚ್ಚು ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ದೃಢಪಡಿಸಿದೆ.
ಏತನ್ಮಧ್ಯೆ, ಇದೇ ಅವಧಿಯಲ್ಲಿ 665 ಹೊಸ ವೈರಸ್ ಸಂಬಂಧಿತ ಸಾವುಗಳು ವರದಿಯಾಗಿದ್ದು, ಇದು ಸಾವಿನ ಸಂಖ್ಯೆಯನ್ನು 4.91 ಲಕ್ಷಕ್ಕೆ ಒಯ್ದಿದೆ. ಹಾಗೂ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ 13,824 ಪ್ರಕರಣಗಳು ಕಡಿಮೆಯಾಗಿವೆ. ಕಳೆದ 24 ಗಂಟೆಗಳಲ್ಲಿ 2,99,073 ಚೇತರಿಕೆಗಳೊಂದಿಗೆ, ಒಟ್ಟು ಚೇತರಿಕೆ 3,73,70,971 ಕ್ಕೆ ಏರಿಕೆಯಾಗಿದ್ದು, ಚೇತರಿಕೆಯ ದರವನ್ನು 93.23% ಕ್ಕೆ ಒಯ್ದಿದೆ. ದೇಶದಲ್ಲಿ ಈಗ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 22.23 ಲಕ್ಷಕ್ಕೆ ತಲುಪಿದೆ.
ಕೋವಿಡ್ ಪ್ರಕರಣಗಳ ದೈನಂದಿನ ಧನಾತ್ಮಕ ಪ್ರಮಾಣವು ಶೇಕಡಾ 16.16 ಕ್ಕೆ ಏರಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement