ಎಲೆಕ್ಟ್ರಾನಿಕ್ ವಸ್ತು ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33 ಹೆಚ್ಚಳ

ನವದೆಹಲಿ: ಭಾರತದಿಂದ ಎಲೆಕ್ಟ್ರಾನಿಕ್ ವಸ್ತುಗಳ ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ. ಡಿಸೆಂಬರ್ ತಿಂಗಳಲ್ಲಿ 1.67 ಬಿಲಿಯನ್ ಯುಎಸ್ ಡಾಲರ್ ಮೊತ್ತದ ವಹಿವಾಟ ದಾಖಲಾಗಿದೆ.
ಅದರಲ್ಲಿ ಮೊಬೈಲ್ ಫೋನ್ ವಿಭಾಗದಲ್ಲೇ ಗರಿಷ್ಠ ರಫ್ತು ಆಗಿದೆ. ಅಲ್ಲದೆ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಟಿವಿ, ಆಡಿಯೋ ಉಪಕರಣಗಳು, ಕೈಗಾರಿಕೆಗೆ ಸಂಬಂಧಿಸಿದ ಉಪಕರಣಗಳು, ವಾಹನಗಳಿಗೆ ಬಳಸುವ ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳ ಬಿಡಿಭಾಗಗಳು, ಎಲ್ ಇಡಿ ಲೈಟಿಂಗ್, ಸೂಕ್ಷ್ಮ ಕಾರ್ಯತಂತ್ರದ ಉಪಕರಣಗಳು, ವಾಚು, ದೂರಸಂಪರ್ಕ ಸಾಧನಗಳು ಇವೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ (ಅಂದರೆ ಏಪ್ರಿಲ್ 2021ರಿಂದ ಡಿಸೆಂಬರ್ 2021ರ ವರೆಗೆ) ಶೇ. 49 (11 ಬಿಲಿಯನ್ ಡಾಲರ್) ಪ್ರಗತಿ ದಾಖಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 7.4 ಬಿಲಿಯನ್ ಡಾಲರ್ ವಹಿವಾಟು ನಡೆದಿತ್ತು ಎಂದು ಸಚಿವಾಲಯ ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement