ಬಿಜೆಪಿ ದೇಶವನ್ನು ಬಿಗ್ ಬಾಸ್ ಶೋ ಆಗಿ ಪರಿವರ್ತಿಸಿದೆ: ಪೆಗಾಸಸ್ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ನಂತರ ಪ್ರತಿಪಕ್ಷಗಳ ವಾಗ್ದಾಳಿ

ನವದೆಹಲಿ: 2017ರಲ್ಲಿ ಇಸ್ರೇಲಿ ಪೆಗಾಸಸ್ ಸ್ಪೈ ವೇರ್ ಅನ್ನು ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿ ಭಾರತ ಖರೀದಿಸಿದೆ ಎಂದು ಹೇಳಿರುವ ನ್ಯೂಯಾರ್ಕ್ ಟೈಮ್ಸ್ ವರದಿ ನಂತರ ಕೇಂದ್ರದ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ತನ್ನ ದಾಳಿ ತೀಕ್ಷ್ಣಗೊಳಿಸಿವೆ. ಸಾಫ್ಟ್‌ವೇರ್ ಬಳಸಿ ಅಕ್ರಮವಾಗಿ ಸ್ನೂಪ್ ಮಾಡುವುದು “ದೇಶದ್ರೋಹ” ಎಂದು ಹೇಳಿದೆ.

ಈ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಮ್ಮ ಪ್ರಾಥಮಿಕ ಪ್ರಜಾಪ್ರಭುತ್ವ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಅನ್ನು ಖರೀದಿಸಿದೆ. ಸರ್ಕಾರದ ಪದಾಧಿಕಾರಿಗಳು, ವಿರೋಧ ಪಕ್ಷದ ನಾಯಕರು, ಸಶಸ್ತ್ರ ಪಡೆಗಳು, ನ್ಯಾಯಾಂಗ ಎಲ್ಲರೂ ಈ ಫೋನ್ ಕದ್ದಾಲಿಕೆಗಳಿಂದ ಗುರಿಯಾಗಿದ್ದರು. ಇದು ದೇಶದ್ರೋಹ. ಮೋದಿ ಸರ್ಕಾರ ದೇಶದ್ರೋಹ ಮಾಡಿದೆ ಎಂದು ಹೇಳಿದ್ದಾರೆ.
ನ್ಯೂಯಾರ್ಕ್‌ ಟೈಮ್ಸ್‌ ವರದಿಯ ಪ್ರಕಾರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ USD 2-ಬಿಲಿಯನ್ ರಕ್ಷಣಾ ಒಪ್ಪಂದದ ಭಾಗವಾಗಿ 2017 ರಲ್ಲಿ ಭಾರತವು ವಿವಾದಾತ್ಮಕ ಇಸ್ರೇಲಿ-ನಿರ್ಮಿತ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿತು. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಭಾರತವು ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ.
ದಿ ಬ್ಯಾಟಲ್ ಫಾರ್ ದಿ ವರ್ಲ್ಡ್ಸ್ ಮೋಸ್ಟ್ ಪವರ್‌ಫುಲ್ ಸೈಬರ್‌ ವೆಪನ್’ ಎಂಬ ಶೀರ್ಷಿಕೆಯ ವರದಿಯು ಮಿಲಿಟರಿ ದರ್ಜೆಯ ಸಾಫ್ಟ್‌ವೇರ್ ಎಂದು ವರ್ಗೀಕರಿಸಲ್ಪಟ್ಟ ಮತ್ತು ಇಸ್ರೇಲಿ ಸಂಸ್ಥೆಯಾದ ಎನ್‌ಎಸ್‌ಒ ಗ್ರೂಪ್ ತಯಾರಿಸಿದ ಸ್ಪೈವೇರ್ ಭಾರತ ಮತ್ತು ಇಸ್ರೇಲ್ ನಡುವೆ ಸುಮಾರು USD ಎರಡು ಬಿಲಿಯನ್ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಪ್ಯಾಕೇಜ್‌ನ ಭಾಗವಾಗಿದೆ” ಎಂದು ಹೇಳಿದೆ.
ವರದಿ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟ್ವಿಟರ್‌ನಲ್ಲಿ, “ಮೋದಿ ಸರ್ಕಾರ ಭಾರತದ ಶತ್ರುಗಳಂತೆ ವರ್ತಿಸಿದ್ದು ಭಾರತೀಯ ನಾಗರಿಕರ ವಿರುದ್ಧ ಯುದ್ಧ ಅಸ್ತ್ರವನ್ನು ಏಕೆ ಬಳಸಿತು ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ಪೆಗಾಸಸ್ ಅನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಸ್ನೂಪಿಂಗ್ ಮಾಡುವುದು ದೇಶದ್ರೋಹಕ್ಕೆ ಸಮಾನವಾಗಿದೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ನ್ಯಾಯವನ್ನು ಒದಗಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ಶಿವಸೇನೆ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಅವರು ಸ್ಪೈವೇರ್ ಅನ್ನು ರಕ್ಷಣಾ ಉದ್ದೇಶಗಳಿಗಾಗಿ ಬಳಸಲಾಗಿಲ್ಲ ಆದರೆ ಪ್ರತಿಪಕ್ಷಗಳು ಮತ್ತು ಪತ್ರಕರ್ತರನ್ನು ಸ್ನೂಪ್ ಮಾಡಲು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ‘ಬಿಜೆಪಿ ಇದ್ದರೆ ಅದು ಸಾಧ್ಯ. ಅವರು ದೇಶವನ್ನೇ ಬಿಗ್ ಬಾಸ್ ಶೋ ಆಗಿ ಮಾಡಿದ್ದಾರೆ’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ರಾಜ್ಯಸಭಾ ಸಂಸದ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹ್ ಗೋಹಿಲ್ ಅವರು  ನರೇಂದ್ರ ಮೋದಿ ಏಕೆ ಮೌನವಾಗಿದ್ದಾರೆ? ಸ್ಪಷ್ಟಪಡಿಸುವುದು ಪಿಎಂಒ ಕರ್ತವ್ಯವಾಗಿದೆ. ನ್ಯೂಯಾರ್ಕ್ ಟೈಮ್ಸ್ ಇಂದು ಬಹಿರಂಗಪಡಿಸಿದೆ, ಇದು ತೆರಿಗೆ ಪಾವತಿದಾರರ ಹಣದಿಂದ 300 ಕೋಟಿಗಳಷ್ಟು ಹಣವನ್ನು ಪಾವತಿಸುವ ಮೂಲಕ ಇಸ್ರೇಲಿ NSO ಕಂಪನಿಯಿಂದ ಮಾರಾಟವಾದ ಸ್ಪೈವೇರ್ ಪೆಗಾಸಸ್ಸಿಗೆ ಚಂದಾದಾರಿಕೆಯಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ಮೋದಿ ಸರ್ಕಾರವು “ಅಕ್ರಮ ಮತ್ತು ಅಸಂವಿಧಾನಿಕ ಬೇಹುಗಾರಿಕೆಯ ನಿಯೋಜಕ ಮತ್ತು ನಿರ್ವಾಹಕ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಬ್ರಹ್ಮೋಸ್ ಕ್ಷಿಪಣಿಗೆ ಬಂತು ಭಾರೀ ಬೇಡಿಕೆ ; ಖರೀದಿಸಲು 17 ದೇಶಗಳು ಕ್ಯೂನಲ್ಲಿ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement