227ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲೆಕ್ಷನ್ ಕಿಂಗ್…!

ಕೊಯಮತ್ತೂರು : ‘ಎಲೆಕ್ಷನ್ ಕಿಂಗ್’ ಎಂದೇ ಹೆಸರಾಗಿರುವ ಕೆ. ಪದ್ಮರಾಜನ್ ಅವರು ದಾಖಲೆಯ 227ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ…!
ಫೆಬ್ರವರಿ 19 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಆರಂಭವಾದ ಬಳಿಕ ನಾಮಪತ್ರ ಸಲ್ಲಿಸಿದವರಲ್ಲಿ ಮೊದಲಿಗರಾಗಿದ್ದಾರೆ.
ಪದ್ಮರಾಜನ್ ಅವರು ಅತ್ಯಂತ ವಿಫಲಗೊಂಡ ಅಭ್ಯರ್ಥಿ ಎಂದು ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಟೈರ್ ವ್ಯವಹಾರದಲ್ಲಿ, ಪದ್ಮರಾಜನ್ ಮೊದಲು 1986 ರಲ್ಲಿ ಮೆಟ್ಟೂರಿನಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು ಬಳಿಕ ಅವರು ಅಟಲ್ ಬಿಹಾರಿ ವಾಜಪೇಯಿ (ಲಕ್ನೊ), ಮನಮೋಹನ್ ಸಿಂಗ್, ಪಿ.ವಿ. ನರಸಿಂಹ ರಾವ್ (ನಂದ್ಯಾಲ್), ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಕೆ.ಆರ್. ನಾರಾಯಣನ್ ಮತ್ತು ಎಪಿಜೆ ಅಬ್ದುಲ್ ಕಲಾಂ ವಿರುದ್ಧವೂ ಅವರು ಸ್ಪರ್ಧಿಸಿದರು. 62 ವರ್ಷದ ಪದ್ಮರಾಜನ್ ಈಗ ವೆರಕಲ್ಪುದೂರ್ (ವಾರ್ಡ್-2) ನಿಂದ ಸ್ಪರ್ಧಿಸುತ್ತಿದ್ದಾರೆ..!
30 ವರ್ಷಗಳಲ್ಲಿ ಸುಮಾರು 30 ಲಕ್ಷ ರೂಪಾಯಿಗಳನ್ನು ಚುನಾವಣೆಗಾಗಿ ಖರ್ಚು ಮಾಡಿರುವ ಪದ್ಮರಾಜನ್, ಆಗಾಗ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ. “1991ರಲ್ಲಿ ಆಂಧ್ರಪ್ರದೇಶದ ನಂದ್ಯಾಲ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ನನ್ನನ್ನು ಅಪಹರಿಸಲಾಗಿತ್ತು. ಅಪಹರಣಕಾರರು ಯಾರೆಂದು ನನಗೆ ತಿಳಿದಿಲ್ಲ ಆದರೆ ಅವರು ನನ್ನನ್ನು ಹೋಗಲು ಬಿಟ್ಟರು ಎಂದು ಅವರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement