ಅಂಡರ್ 19 ವಿಶ್ವಕಪ್ ಪಂದ್ಯದ ವೇಳೆ ಕಂಪಿಸಿದ ಭೂಮಿ: ವಿಡಿಯೊ ವೀಕ್ಷಿಸಿ

ಪೋರ್ಟ್ ಆಫ್ ಸ್ಪೈನ್: ಕೆರಿಬಿಯನ್ ದ್ವೀಪ ಸಮೂಹದಲ್ಲಿ ನಡೆಯುತ್ತಿರುವ ಅಂಡರ್ -19 ವಿಶ್ವಕಪ್ ಪಂದ್ಯ ನಡೆಯುತ್ತಿರುವಾಗ ಭೂಕಂಪನದ ಅನುಭವವಾಗಿದೆ.
ಟ್ರನಿಡಾಡ್ ನ ಪೋರ್ಟ್ ಆಫ್ ಸ್ಪೇನ್ ನಲ್ಲಿ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಭೂಕಂಪನದ ಅನುಭವವಾಗಿದೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಗಳು ಸಹ ನಡುಗಿದೆ. ಆದರೆ ಪಂದ್ಯದಲ್ಲಿ ಆಡುತ್ತಿದ್ದ ಆಟಗಾರರಿಗೆ ಇದರ ಅನುಭವವಾಗಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಿದೆ.

ಪೋರ್ಟ್ ಆಫ್ ಸ್ಪೇನ್‌ನ ಕರಾವಳಿಯಲ್ಲಿ 5.2 ತೀವ್ರತೆಯ ಭೂಕಂಪವಾಗಿದೆ. ಕಾಮೆಂಟರಿ ಬಾಕ್ಸ್ ನಡುಗಿದೆ. ಐಸಿಸಿ ನಿರೂಪಕ ಆಂಡ್ರ್ಯೂ ಲಿಯೊನಾರ್ಡ್ ನಡುಕದ ಅನುಭವನ್ನು ತಿಳಿಸಿದ್ದಾರೆ.
ಜಿಂಬಾಬ್ವೆ ಇನ್ನಿಂಗ್ಸ್‌ನ 6 ನೇ ಓವರ್‌ನಲ್ಲಿ ನಡುಕ ದೂರದರ್ಶನ ಕ್ಯಾಮೆರಾಗಳನ್ನು ಅಲುಗಾಡಿಸಿತು. ಭೂಕಂಪದಿಂದ ಆಟಕ್ಕೆ ತೊಂದರೆಯಾಗದ ಕಾರಣ ಐರ್ಲೆಂಡ್‌ನ ಸ್ಪಿನ್ನರ್ ಮ್ಯಾಥ್ಯೂ ಹಂಫ್ರೀಸ್ ಬೌಲಿಂಗ್ ಮುಂದುವರಿಸಿದರು.
ನಮಗೆ ಬಾಕ್ಸ್‌ನಲ್ಲಿ ಭೂಕಂಪದ ಅನುಭವವಾಗಿದೆ. ನಿಜವಾಗಿಯೂ ಭೂಕಂಪವಾಗುತ್ತಿದೆ. 15-20 ಸೆಕೆಂಡುಗಳ ಕಾಲ ಕಂಪನದ ಅನುಭವವಾಯಿತು” ಎಂದು ಅವರು ಹೇಳಿದರು.
ಅಂಡರ್ 19 ವಿಶ್ವಕಪ್ ಭೂಕಂಪನದ ಅನುಭವದ ವಿಡಿಯೋವನ್ನು ಪತ್ರಕರ್ತ ಪೀಟರ್ ಡೆಲ್ಲಾ ಪೆನ್ನಾ ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement