ಚನ್ನಿ-ಸಿಧು ಜಗಳದ ನಡುವೆ, ಅಮರಿಂದರ್ ನಿರ್ಗಮನದ ನಂತರ 42 ಶಾಸಕರು ತಾನು ಪಂಜಾಬ್ ಸಿಎಂ ಆಗಬೇಕೆಂದು ಬಯಸಿದ್ದರು ಎಂದ ಸುನೀಲ್ ಜಾಖರ್

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನಜೋತ್ ಸಿಂಗ್ ಸಿಧು ನಡುವೆ ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆ ಕಾಪ್ಟನ್‌ ಅಮರಿಂದರ್ ಸಿಂಗ್ ರಾಜೀನಾಮೆಯ ನಂತರ ಹಲವು ಶಾಸಕರು ತಾನು ಪ್ರಮುಖ ಸ್ಥಾನವನ್ನು ವಹಿಸಿಕೊಳ್ಳಲು ಬಯಸಿದ್ದರು ಎಂದು ಪಕ್ಷದ ಹಿರಿಯ ನಾಯಕ ಸುನೀಲ್ ಜಾಖರ್ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದ 42 ಶಾಸಕರು ತಾವು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರು ಎಂದು ಜಾಖರ್ ಹೇಳುವುದನ್ನು ಆನ್‌ಲೈನ್‌ನಲ್ಲಿ ಪ್ರಸಾರವಾದ ವಿಡಿಯೊದಲ್ಲಿ ಕೇಳಬಹುದು.
42 ಮತಗಳು ಸುನಿಲ್ ಜಾಖರ್, 16 ಮತಗಳು ಸುಖ್ಜಿಂದರ್ ರಾಂಧವಾ, 12 ಮತಗಳು ಮಹಾರಾಣಿ ಪ್ರಣೀತ್ ಕೌರ್ (ಅಮರಿಂದರ್ ಸಿಂಗ್ ಅವರ ಪತ್ನಿ ಮತ್ತು ಪಟಿಯಾಲಾ ಸಂಸದೆ), 6 ಮತಗಳು ನವಜೋತ್ ಸಿಂಗ್ ಸಿಧು ಮತ್ತು (ಚರಣ್ಜಿತ್ ಸಿಂಗ್) ಚನ್ನಿಗೆ ಎರಡು ಮತಗಳು ಬಿದ್ದಿತ್ತು ಎಂದು ಜಾಖರ್ ವಿಡಿಯೊದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದ ಉಪಮುಖ್ಯಮಂತ್ರಿ ಆಗುವ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ಜಾಖರ್ ಹೇಳಿದ್ದಾರೆ.
ಆ ಸಮಯದಲ್ಲಿ ನಾನು ಏನೂ ಇಲ್ಲದಿದ್ದರೂ 42 ಶಾಸಕರು ನನಗೆ ಮತ ಹಾಕಿದರು. ನಾನು ಪಿಪಿಸಿಸಿ ಅಧ್ಯಕ್ಷನೂ ಆಗಿರಲಿಲ್ಲ,” ಎಂದು ಹೇಳಿದ ಜಾಖರ್, 79 ಶಾಸಕರು ಯಾರನ್ನು ಮುಖ್ಯಮಂತ್ರಿ ಆಗಬೇಕು ಎಂದು ಕೇಳಲಾಗಿತ್ತು ಎಂದು ಹೇಳಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಬೋರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತಮ್ಮ ಸೋದರಳಿಯ ಸಂದೀಪ್ ಜಾಖರ್ ಪರ ಪ್ರಚಾರ ನಡೆಸುತ್ತಿದ್ದ ಅವರು ಮಂಗಳವಾರ ಈ ಹೇಳಿಕೆ ನೀಡಿದ್ದಾರೆ.
ಸಿಂಗ್ ಅವರ ನಿರ್ಗಮನದ ನಂತರ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಸ್ಪರ್ಧಿಗಳಲ್ಲಿ ಜಾಖರ್ ಒಬ್ಬರಾಗಿದ್ದರು. ಆದರೆ, ಪರಿಶಿಷ್ಟ ಜಾತಿಗೆ ಸೇರಿದ ಚರಣ್‌ಜಿತ್‌ ಸಿಂಗ್‌ ಚನ್ನಿ ಪ್ರಮುಖ ಹುದ್ದೆಗೆ ಕಾಂಗ್ರೆಸ್‌ ಆಯ್ಕೆ ಮಾಡಿದೆ. ಸಿಧು ಅವರೊಂದಿಗಿನ ತೀವ್ರ ಹಣಾಹಣಿಯ ನಡುವೆ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಗೆ ಮೊದಲು ಪಕ್ಷವು ಮುಖ್ಯಮಂತ್ರಿಯ ಮುಖವನ್ನು ಘೋಷಿಸಲಿದೆ ಎಂದು ರಾಹುಲ್ ಗಾಂಧಿ ಕಳೆದ ವಾರ ವರ್ಚುವಲ್ ರ್ಯಾಲಿಯಲ್ಲಿ ಘೋಷಿಸಿದ್ದರು.
ಕಳೆದ ಹಲವು ವಾರಗಳಿಂದ ಚನ್ನಿ ಮತ್ತು ಸಿದ್ದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement