ಮೃಗಾಲಯದ ಕರಡಿ ಬೋನಿಗೆ 3 ವರ್ಷದ ಮಗುವನ್ನು ಎಸೆದ ಮಹಿಳೆ..! ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಮೃಗಾಲಯದಲ್ಲಿದ್ದ ಕರಡಿ ಬೋನಿಗೆ ಎಸೆದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಉಜ್ಬೇಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದ್ದು, ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಪ್ರವಾಸಿಗರ ಎದುರೇ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಹೆಣ್ಣು ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಘಟನೆ ಮೃಗಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಡೈಲಿ ಮೇಲ್ ವರದಿಯ ಪ್ರಕಾರ ಮಹಿಳೆಯ ಮಗುವನ್ನು 16 ಅಡಿಗಳಷ್ಟು ಕೆಳಗೆ ಎಸೆದಿದ್ದು, ಮಗುವನ್ನು ಸಾಯಿಸಲು ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ. ಜೂಜು (Zuzu) ಎನ್ನುವ ಕರಡಿಯಿದ್ದ ಜಾಗಕ್ಕೆ ಮಗುವನ್ನು ಎಸೆದಿದ್ದಾಳೆ ಎಂದು ವರದಿಯಾಗಿದೆ.
ಈ ಘಟನೆಯ ವಿಡಿಯೊವನ್ನು ಟ್ವಿಟರ್​ಲ್ಲಿ ಹಂಚಿಕೊಳ್ಳಲಾಗಿದ್ದು ವಿಡಿಯೊದಲ್ಲಿ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಬಂದು ಕರಡಿ ಓಡಾಡುತ್ತಿರುವ ಬೋನ್​ನೊಳಗೆ ಎಸೆಯುತ್ತಾಳೆ. ತಕ್ಷಣವೇ ಮೃಗಾಲಯದ ಸಿಬ್ಬಂದಿ ಓಡಿ ಹೋಗಿ ಮಗುವನ್ನು ರಕ್ಷಿಸುವುದನ್ನು ಕಾಣಬಹುದು.
ವರದಿಯ ಪ್ರಕಾರ ಮಗುವಿಗೆ ಬಿದ್ದ ಗಾಯಗಳಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಪ್ರಕರಣ ಸಾಬೀತಾದರೆ 15 ವರ್ಷ ಜೈಲು ಶಿಕ್ಷೆಗೆ ಆಗಲಿದೆ. ಈ ಕುರಿತು ಮೃಗಾಲಯದ ಸಿಬ್ಬಂದಿ ಮಾತನಾಡಿ, ಮಹಿಳೆ ಏಕಾಏಕಿ ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಆಕೆಯ ಉದ್ದೇಶದ ಬಗ್ಗೆ ತಿಳಿದಿಲ್ಲ. ಮಗುವನ್ನು ರಕ್ಷಿಸಲಾಗಿದೆ ಎಂದಿದ್ದಾರೆ. ಕೆಲ ವರದಿಯ ಪ್ರಕಾರ 30 ವರ್ಷದ ಮಹಿಳೆ ಪತಿಯಿಂದ ದೂರವಾಗಿ ರಷ್ಯಾದಲ್ಲಿ ವಾಸವಿದ್ದಳು. ಅವಳಿಗೆ ಇಬ್ಬರು ಮಕ್ಕಳಿದ್ದು, ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement