ವಿಶೇಷ ಸಾಮರ್ಥ್ಯವುಳ್ಳ ಅಂಗವಿಕಲ ವ್ಯಕ್ತಿಗೆ ತಮ್ಮ ಕಂಪನಿಯಲ್ಲಿ ಕೆಲಸ ನೀಡಿ ಕೊಟ್ಟ ಮಾತು ಉಳಿಸಿಕೊಂಡ ಆನಂದ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಪೋಸ್ಟ್‌ಗಳಿಗಾಗಿ ಟ್ವಿಟರ್‌ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅದರೊಂದಿಗೆ ಅವರು ತಮ್ಮ ಪರೋಪಕಾರಿ ಚಟುವಟಿಕೆಗಳಿಂದ ನೆಟಿಜನ್‌ಗಳ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ.

ಕಳೆದ ವರ್ಷ, ಡಿಸೆಂಬರ್‌ನಲ್ಲಿ, ಮಹೀಂದ್ರಾ ಟ್ವಿಟರ್‌ನಲ್ಲಿ ದೆಹಲಿಯ ಕ್ವಾಡ್ರುಪಲ್ ಅಂಗವಿಕಲನ ಕುರಿತು ‘ವಿಸ್ಮಯಕಾರಿ’ ಪೋಸ್ಟ್‌ ಮಾಡಿದ್ದರು. ಆ ವ್ಯಕ್ತಿಯ ಹೋರಾಟದ ಮನೋಭಾವದಿಂದ ಅವರು ಪ್ರಭಾವಿತರಾದರು ಹಾಗೂ ಆತನಿಗೆ ಸಹಾಯ ಮಾಡಲು ನಿರ್ಧರಿಸಿದರು.
ತನ್ನ ಇತ್ತೀಚಿನ ಟ್ವಿಟ್ಟರ್ ಪೋಸ್ಟ್‌ನಲ್ಲಿ, ಮಹೀಂದ್ರಾ ತನ್ನ ಭರವಸೆಯನ್ನು ಉಳಿಸಿಕೊಂಡ ಬಗ್ಗೆ ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ. ಬಿರ್ಜು ರಾಮ್ ಎಂದು ಗುರುತಿಸಲಾದ ವ್ಯಕ್ತಿಗೆ ದೆಹಲಿಯ ಇವಿ ಚಾರ್ಜಿಂಗ್ ಯಾರ್ಡ್‌ನಲ್ಲಿರುವ ಮಹೀಂದ್ರಾ ಕಂಪನಿಯಲ್ಲಿ ಕೆಲಸ ನೀಡಿದ್ದಾರೆ. ಪೋಸ್ಟ್‌ನಲ್ಲಿ ಬಿರ್ಜು ರಾಮ್ ಕೆಲವು ಅಧಿಕೃತ ದಾಖಲೆಗಳಿಗೆ ಸಹಿ ಹಾಕಿದ ಮತ್ತು ಉದ್ಯೋಗಿಯಾಗಿ ಸ್ವಾಗತಿಸುತ್ತಿರುವ ಎರಡು ಫೋಟೋಗಳನ್ನು ಸಹ ಒಳಗೊಂಡಿದೆ.
ದೆಹಲಿಯಲ್ಲಿರುವ ನಮ್ಮ ಇವಿ (EV) ಚಾರ್ಜಿಂಗ್ ಯಾರ್ಡ್‌ಗಳಲ್ಲಿ ಬಿರ್ಜು ರಾಮ್‌ಗೆ ಉದ್ಯೋಗ ನೀಡಿದ್ದಕ್ಕಾಗಿ ನಾನು ರಾಮ್ ಮತ್ತು @Mahindralog_MLL ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರತಿಯೊಬ್ಬರೂ ಬ್ರೇಕ್‌ಗೆ ಅರ್ಹರು,” ಮಹೀಂದ್ರ ಎಂದು ವಿಡಿಯೊ ಶೀರ್ಷಿಕೆ ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement