ಮ್ಯಾಜಿಕ್ ಟ್ರಿಕ್ ನೋಡಿ ನಂತರ ದಿಗ್ಭ್ರಮೆಗೊಂಡ ಮೃಗಾಲಯದ ಕೋತಿ…! ದೃಶ್ಯ ವಿಡಿಯೊದಲ್ಲಿ ಸೆರೆ

ಮ್ಯಾಜಿಕ್ ತಂತ್ರಗಳು ಎಲ್ಲಾ ವಯಸ್ಸಿನವರನ್ನೂ ವಿಸ್ಮಯಗೊಳಿಸುತ್ತದೆ. ಮಕ್ಕಳಾಗಿರಲಿ ಅಥವಾ ದೊಡ್ಡವರಾಗಿರಲಿ, ಯಾರಾದರೂ ತಮ್ಮ ಕಿವಿಯಿಂದ ನಾಣ್ಯವನ್ನು ತೆಗೆದರೆ, ಅವರು ಸಂತೋಷದಿಂದ ಚಪ್ಪಾಳೆ ತಟ್ಟುತ್ತಾರೆ. ಆದರೆ ಈಗ ಮೆಕ್ಸಿಕೋದ ಮೃಗಾಲಯದ ಮಂಗವೊಂದು ಇದೇ ರೀತಿಯ ಅಭಿವ್ಯಕ್ತಿಯನ್ನು ಪ್ರದರ್ಶಿಸಿದ್ದು, ಅದರ ವಿಡಿಯೊ ವೈರಲ್ ಆಗುತ್ತಿದೆ. ಜಾದೂ ನೋಡಿದ ಮಂಗನ ಆಶ್ಚರ್ಯಕರ ಮುಖವು ನಿಮ್ಮ ಅಚ್ಚರಿಗೂ ಕಾರಣವಾಗುತ್ತದೆ.

ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಮ್ಯಾಕ್ಸಿಮಿಲಿಯಾನೊ ಇಬಾರಾ ಎಂಬವರ ವ್ಯಕ್ತಿಯೊಬ್ಬ ಕೋತಿಗೆ ಮ್ಯಾಜಿಕ್ ಟ್ರಿಕ್ ತೋರಿಸುವುದನ್ನು ತೋರಿಸುತ್ತದೆ. ಟ್ರಿಕ್ ನೋಡಿದ ನಂತರ ಕೋತಿ ಸಂಪೂರ್ಣವಾಗಿ ಅಚ್ಚರಿಗೊಳಗಾಗುತ್ತದೆ. ಮತ್ತು ಅದರ ಬಗ್ಗೆ ಅದು ಹೇಗೆ ಸಾಧ್ಯ ಎಂಬ ಅಪನಂಬಿಕೆಯ ಅಭಿವ್ಯಕ್ತಿಯನ್ನು ತೋರಿಸುತ್ತದೆ. ಡೈಲಿ ಮೇಲ್ ವರದಿಯ ಪ್ರಕಾರ, ಮೆಕ್ಸಿಕೋ ನಗರದ ಚಾಪಲ್ಟೆಪೆಕ್ ಮೃಗಾಲಯದಲ್ಲಿ ಈ ದೃಶ್ಯವನ್ನು ದಾಖಲಿಸಲಾಗಿದೆ.
ಕೋತಿಯ ಮುಖಭಾವವು “ಇದು ಏನು ವಾಮಾಚಾರ?” ಎಂದು ಹೇಳುವಂತಿದೆ ಎಂದು ಹಲವರು ಇದಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement