ಬೆಂಗಳೂರಲ್ಲಿ ವೈಫ್ ಗಿವಿಂಗ್‌ ದಂಧೆಗೆ ಸಾರ್ವಜನಿಕ ಆಹ್ವಾನ ನೀಡಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪತಿ ಈಗ ಪೊಲೀಸರ ಅತಿಥಿ..!

ಬೆಂಗಳೂರು: ತನ್ನ ಹೆಂಡತಿಯನ್ನು ಬೇರೊಬ್ಬನ ಜೊತೆ ಲೈಂಗಿಕ ದಂಧೆಗೆ ಇಳಿಸಿ, ಅದನ್ನು ವಿಡಿಯೋ ಚಿತ್ರೀಕರಣ ಮಾಡುವ ವಿಲಕ್ಷಣ ಮನಸ್ಥಿತಿಯ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ತಾಳಿ ಕಟ್ಟಿಸಿಕೊಂಡ ಹೆಂಡತಿಯನ್ನೇ ಪರಪುರುಷರ ಜೊತೆ ಮಲಗಿಸಿ ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹಣ ಮಾಡುವ ದಾರಿ ಕಂಡುಕೊಂಡಿದ್ದ ಈ ವ್ಯಕ್ತಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ‘ವೈಫ್ ಸ್ವಾಪಿಂಗ್’ ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಅಹ್ವಾನ ನೀಡಿ ದಂಧೆ ನಡೆಸುತ್ತಿದ್ದ.
ಆತ ತನ್ನ ಹೆಂಡತಿಯನ್ನೇ ಪರ ಪುರುಷರ ಜೊತೆ ಸಮ್ಮಿಲನ ಮಾಡಿಸಿ ಅದನ್ನು ಮೊಬೈಲ್​​ನಲ್ಲಿ ವಿಡಿಯೋ ಮಾಡಿ ನೋಡುವ ಹುಚ್ಚು ಬೆಳೆಸಿಕೊಂಡಿದ್ದ. ಜೊತೆಗೆ ಅದನ್ನೇ ದಂಧೆ ಮಾಡಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ವೈಫ್ ಗಿವಿಂಗ್​ಗೆ ಆಹ್ವಾನ ನೀಡುತ್ತಿದ್ದ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಕೇರಳ ರಾಜ್ಯದಲ್ಲಿ ಸುದ್ದಿಯಾಗಿದ್ದ ‘ವೈಫ್ ಸ್ವಾಪಿಂಗ್’ ದಂಧೆ‌ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಈ ಸಂಬಂಧ ಮಂಡ್ಯ ಮೂಲದ ವಿನಯಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಮಂಡ್ಯ ಮೂಲದ ವಿನಯಕುಮಾರ್, ಎಲೆಕ್ಟ್ರಾನಿಕ್ ಶಾಪೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ. ಮಾಗಡಿಯ ಯುವತಿ ಅಲ್ಲೇ ಕೆಲಸ ಮಾಡುತ್ತಿದ್ದಳು. ಈ ವೇಳೆ ಪ್ರೀತಿಸಿ 2019ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದರು. ಸಿಂಗಸಂದ್ರದಲ್ಲಿ ವಾಸವಾಗಿದ್ದ ದಂಪತಿಗೆ ಒಂದೂವರೆ ವರ್ಷದ ಮಗುವಿದೆ‌. ಪತಿಯ ದಂಧೆಗೆ ಪತ್ನಿಯೂ ಸಹ ಒಪ್ಪಿಗೆ ‌ನೀಡಿದ್ದಳಂತೆ.‌ ಈ ವಿಲಕ್ಷಣ ದಂಪತಿ ಹೈಟೆಕ್ ಮಾದರಿಯಲ್ಲಿ ದಂಧೆ ನಡೆಸಿ ಹಣ ಸಂಪಾದನೆ ಮಾಡುವ ಪ್ಲಾನ್​​​ ರೂಪಿಸಿಕೊಂಡಿದ್ದರು. ಆರೋಪಿ ಟ್ವಿಟರ್​​ನಲ್ಲಿ ಹಾಕಿರುವ ಮಾಹಿತಿ ನೋಡಿ ಗ್ರಾಹಕರು ಆರೋಪಿಯನ್ನು ಸಂಪರ್ಕಿಸುತ್ತಿದ್ದರು. ಬಳಿಕ ಸಿಂಗಸಂದ್ರದ ತಮ್ಮ ಮನೆಗೆ ಕರೆಯಿಸಿಕೊಳ್ಳುತ್ತಿದ್ದ. ಗ್ರಾಹಕರು ಒಪ್ಪಿಕೊಂಡ್ರೆ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿದ್ದನಂತೆ ಎಂಬುದು ಬೆಳಕಿಗೆ ಬಂದಿದೆ.
ನಕಲಿ ಖಾತೆ ತೆರೆದು ಹೆಂಡತಿಯ ಫೋಟೋ ಶೇರ್​ ಮಾಡುತ್ತಿದ್ದ ಆರೋಪಿ ಗಂಡ ನಗರದಲ್ಲಿ ಹೈಟೆಕ್ ವೈಫ್ ಗಿವಿಂಗ್ ನಡೆಯುತ್ತಿರುವ ಬಗ್ಗೆ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದ.‌ ಇದನ್ನು ಸಾರ್ವಜನಿಕರೊಬ್ಬರು ನಗರ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಮಂಡ್ಯ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಲವು ತಿಂಗಳಿಂದ ಫ್ಯಾಂಟಸಿಗಾಗಿ ದಂಧೆ ನಡೆಸುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾನಂತೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಈತನನ್ನು 14 ದಿನಗಳ ಕಾಲ‌ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ‌.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement