216 ಅಡಿ ಎತ್ತರದ ಪಂಚಲೋಹದ ರಾಮಾನುಜರ ಪ್ರತಿಮೆ ಲೋಕಾರ್ಪಣೆ

ಹೈದರಾಬಾದ್,: ಜಾತಿ ವ್ಯವಸ್ಥೆ ತೊಡೆದು ಹಾಕಲು ಪ್ರಯತ್ನಿಸಿದ ಸಂತ ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೆ ವ್ಯಾಪಿಸಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಹೈದರಾಬಾದ್​ನ ಹೊರವಲಯದಲ್ಲಿರುವ ಮುಂಚಿತ್ತಾಲ್​ನಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪಂಚಲೋಹದ ಪ್ರತಿಮೆಯನ್ನು ಇಂದು ಶನಿವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ. ಯುಗಯುಗಗಳ ವರೆಗೆ ನಾವು ಮಾನವತ್ವಕ್ಕೆ ದಿಕ್ಕನ್ನು ತೋರಿಸಿದ್ದೇವೆ. ಮಾನವೀಯತೆ ಶಕ್ತಿಗೆ ಮೂರ್ತ ರೂಪ ನೀಡಲಾಗಿದೆ. ಪ್ರತಿಮೆ ಮುಂದಿನ ಪೀಳಿಗೆಗೆ ಮಾತ್ರ ಪ್ರೇರಣೆ ನೀಡುವುದರ ಜೊತೆಗೆ ಭಾರತದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಕಾರ್ಯ ಕೈಗೊಂಡ ರಾಮಾನುಜಾಚಾರ್ಯರ ಅನುಯಾಯಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕೂಡ ರಾಮಾನುಜರನ್ನು ಪ್ರಶಂಸಿಸುತ್ತಿದ್ದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದ್ದರು. ಕನಕದಾಸರು ಕನ್ನಡದಲ್ಲಿ ರಾಮಾನುಜರನ್ನು ಪ್ರಶಂಸಿಸಿದ್ದಾರೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
ವಸಂತಪಂಚಮಿ ದಿನ ಪ್ರತಿಮೆ ಅನಾವರಣ ಗೊಳಿಸಿದ್ದಕ್ಕೆ ಸಂತೋಷವಾಗಿದೆ. ಶಾರದಾ ಮಾತೆ ಕೃಪೆಯಲ್ಲಿ ರಾಮಾನುಜರ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಜಗದ್ಗುರು ಶ್ರೀ ರಾಮಾನುಜಾಚಾರ್ಯರು ವಿಶ್ವಕ್ಕೇ ಜ್ಞಾನ ಪಥ. ಗುರು ಮಾಧ್ಯಮ ಮೂಲಕವೇ ನಮಗೆಲ್ಲಾ ಜ್ಞಾನ ಪ್ರಸರಣ ಆಗುತ್ತದೆ. ಭವ್ಯವಾದ ವಿಶಾಲ ಮೂರ್ತಿಯು ಮಾನವ ಸಂಕುಲಕ್ಕೇ ಪ್ರೇರಣೆಯಾಗಿರದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement