ಭಾರತದಲ್ಲಿ ಒಂದೇ ಡೋಸ್ ಕೊವಿಡ್ ಲಸಿಕೆ ರಷ್ಯಾದ ಸ್ಪುಟ್ನಿಕ್ ಲೈಟ್‌ ಬಳಕೆಗೆ ಡಿಸಿಜಿಐ ಅನುಮತಿ

ನವದೆಹಲಿ: ರಷ್ಯಾ ತಯಾರಿಸಿರುವ ಕೊರೊನಾ ವಿರೋಧಿ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್​ ಲೈಟ್‌ (Sputnik) ತುರ್ತು ಬಳಕೆಗೆ ಭಾರತ ಔಷಧ ಮಹಾ ನಿಯಂತ್ರಕರ (Drugs Controller General of India – DCGI) ಅನುಮತಿ ನೀಡಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಮನ್​ಸುಖ್ ಮಾಂಡವಿಯ ಟ್ವೀಟ್ ಮಾಡಿದ್ದು, ಇದು ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದುಕೊಂಡ 9ನೇ ಲಸಿಕೆಯಾಗಿದೆ. ಈ ಲಸಿಕೆಯ ಬಳಕೆಗೆ ಅನುಮತಿ ಸಿಕ್ಕಿರುವುದು ಕೊರೊನಾ ಪಿಡುಗಿನ ವಿರುದ್ಧದ ಹೋರಾಟಕ್ಕೆ ಹೊಸ ಬಲ ನೀಡಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್ ಲಸಿಕೆಯನ್ನು ಬೂಸ್ಟರ್ ಡೋಸ್‌ ಆಗಿ ನೀಡಲು ಅನುಮತಿ ನೀಡಬೇಕೆಂದೂ ಡಿಸಿಜಿಐಗೆ ಪ್ರಸ್ತಾವ ಸಲ್ಲಿಸಿತ್ತು. ಡಾಕ್ಟರ್ ರೆಡ್ಡಿಸ್ ಕಂಪನಿಯು ರಷ್ಯಾದ ಸ್ಪುಟ್ನಿಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಸೆಪ್ಟೆಂಬರ್ 2020ರಿಂದ ಸ್ಪುಟ್ನಿಕ್ ಲಸಿಕೆಯ ಟ್ರಯಲ್​ಗಳು ನಡೆಯುತ್ತಿದ್ದವು.
ಸ್ಪುಟ್ನಿಕ್ ಉತ್ಪಾದನೆಗೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ. ಭಾರತ ಸರ್ಕಾರ ಕೇಳಿರುವ ಎಲ್ಲ ಮಾಹಿತಿ ಒದಗಿಸಿದ್ದೇವೆ. ಕೊರೊನಾ ನಿರೋಧಕ ಲಸಿಕೆಯಾಗಿ ಸ್ಪುಟ್ನಿಕ್ ಲೈಟ್​ ಮತ್ತು ಬೂಸ್ಟರ್ ಲಸಿಕೆಯಾಗಿ ಸ್ಪುಟ್ನಿಕ್-ವಿ ನೀಡಲು ಅನುಮತಿ ಕೋರುತ್ತಿದ್ದೇವೆ’ ಎಂದು ಡಾಕ್ಟರ್ ರೆಡ್ಡಿಸ್ ಕಂಪನಿಯ ಸಿಇಒ ಎರೆಸ್ ಇಸ್ರೇಲಿ ಹೇಳಿದ್ದರು.

ಪ್ರಮುಖ ಸುದ್ದಿ :-   "ಪ್ರತಿಯೊಂದು ದುಸ್ಸಾಹಸವೂ...ಯಾವುದೇ ಭಯೋತ್ಪಾದಕ ಕೃತ್ಯವೂ...": ಕದನ ವಿರಾಮ ಘೋಷಣೆ ನಂತ್ರ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement