ಕುಂದಾಪುರ: ಈಗ ಮತ್ತೊಂದು ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಉಡುಪಿ: : ಹಿಜಾಬ್‌ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತೆಲೆ ಇದ್ದು, ದಿನದಿಂದ ದಿನಕ್ಕೆ ಉಡುಪಿ ಜಿಲ್ಲೆಯ ಹೊಸ ಹೊಸ ಕಾಲೇಜುಗಳಲ್ಲಿ ಈ ವಿವಾದ ಹಬ್ಬುತ್ತಿದೆ.
ಜಿಲ್ಲೆಯ ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು.ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಕೇಸರಿ ಧರಿಸಿದ ವಿಧ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರು ಬೇರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಅಡ್ಡಿಯುಂಟು ಮಾಡದಂತೆ ಸೂಚನೆ ನೀಡಿದರು. ನಂತರ ಕೇಸರಿ ಶಾಲುಗಳನ್ನು ತೆಗೆದು ತರಗತಿ ಪ್ರವೇಶಕ್ಕೆ ಅನುಮತಿ ನೀಡಿದರು.
ಈ ಸಂದರ್ಭ , ಸರ್ಕಾರದ ಆದೇಶದ ಪ್ರಕಾರ ಕ್ಯಾಂಪಸ್ ಒಳಗೆ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದು ಆ ಬಳಿಕ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ತೆಗೆದು ತರಗತಿಗಳನ್ನು ಪ್ರವೇಶಿಸಿದರು.
ಈ ಮಧ್ಯೆ ಉಡುಪಿ ಎಂಜಿಎಂ ಕಾಲೇಜಿನಲ್ಲಿಯೂ ಹಿಜಾಬ್‌ ಮುಂದುವರಿದರೆ ನಾಳ, ಮಂಗಳವಾರದಿಂದ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ವಿದ್ಯಾರ್ಥಿ ಗಳ ಜೊತೆ ಮಾತುಕತೆ ನಡೆಸಿದ ಕಾಲೇಜು ಪ್ರಾಂಶುಪಾಲರು, ಸರ್ಕಾರದ ವಸ್ತ್ರಸಂಹಿತೆಯಂತೆ ನಾಳೆಯಿಂದ ಹಿಜಾಬ್ ತೆಗೆದು ತರಗತಿ ಪ್ರವೇಶಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement