2022ರ ಆದೇಶ ಹಿಂಪಡೆದ ಸರ್ಕಾರ ; ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ

ಬೆಂಗಳೂರು: ಕರ್ನಾಟಕ ಸರ್ಕಾರವು ಫೆಬ್ರವರಿ 2022 ರಲ್ಲಿ ಶಾಲಾ ಸಮವಸ್ತ್ರಗಳ ಕುರಿತು ತನ್ನ ಆದೇಶವನ್ನು ಹಿಂತೆಗೆದುಕೊಂಡಿದೆ ಮತ್ತು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರಗಳ ಜೊತೆಗೆ ಸಾಂಪ್ರದಾಯಿಕ ಮತ್ತು ಧರ್ಮ ಆಧಾರಿತ ಚಿಹ್ನೆಗಳನ್ನು ಸೀಮಿತ ಶ್ರೇಣಿಯಲ್ಲಿ ಧರಿಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡುವ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸರ್ಕಾರದ … Continued

ಯೂಟ್ಯೂಬ್‌ ವರ್ಚುವಲ್ ಕಛೇರಿಯಲ್ಲಿ ಹಾಡಿದ ಗಾಯಕಿ ; ಹಿಜಾಬ್ ಧರಿಸಿಲ್ಲ ಎಂದು ಆಕೆಯ ಬಂಧನ…!

ಹಿಜಾಬ್ ಧರಿಸದೆ ಯೂಟ್ಯೂಬ್‌ನಲ್ಲಿ ವರ್ಚುವಲ್ ಕಛೇರಿಯಲ್ಲಿ ಪ್ರದರ್ಶನ ನೀಡಿದ ನಂತರ 27 ವರ್ಷದ ಇರಾನಿನ ಗಾಯಕಿಯನ್ನು ಬಂಧಿಸಲಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 280 ಕಿಮೀ ದೂರದಲ್ಲಿರುವ ಮಜಂದರಾನ್ ಪ್ರಾಂತ್ಯದ ಸಾರಿ ನಗರದಲ್ಲಿ ಶನಿವಾರ ಪರಸ್ಟೂ ಅಹ್ಮದಿಯನ್ನು ಬಂಧಿಸಲಾಗಿದೆ ಎಂದು ಆಕೆಯ ವಕೀಲ ಮಿಲಾದ್ ಪನಾಹಿಪೂರ್ ಹೇಳಿದ್ದಾರೆ. … Continued

ಪ್ರಾಂಶುಪಾಲರ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗೂ ತಟ್ಟಿದ ಹಿಜಾಬ್‌ ವಿವಾದ ; ತಾನೇ ಘೋಷಿಸಿ ಪ್ರಶಸ್ತಿ ತಡೆಹಿಡಿದ ಸರ್ಕಾರ…!

ಬೆಂಗಳೂರು: ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿರೋಧಿ ನಿಲುವು ತೋರಿದ ಆರೋಪದ ಮೇಲೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ತಡೆಹಿಡಿದಿದೆ ಎಂದು ವರದಿಯಾಗಿದೆ. ಶಿಕ್ಷಕರ ದಿನಾಚರಣೆಯಂದು ಉಡುಪಿ ಜಿಲ್ಲೆಯ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ. ಅವರು ಪ್ರಶಸ್ತಿ ಸ್ವೀಕರಿಸಬೇಕಿತ್ತು, ಆದರೆ … Continued

ಹಿಜಾಬ್ ನಿಷೇಧ | ಮುಂಬೈ ಕಾಲೇಜಿಗೆ ಸುಪ್ರೀಂ ಕೋರ್ಟ್ ತರಾಟೆ; ವಸ್ತ್ರ ಸಂಹಿತೆಗೆ ತಡೆ

ನವದೆಹಲಿ : ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬುರ್ಖಾ ಮತ್ತು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಮುಂಬೈ ಕಾಲೇಜಿನ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಸುಪ್ರೀಂ ಕೋರ್ಟ್, ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವ ಮೂಲಕ ನೀವು ಹೇಗೆ ಮಹಿಳೆಯರ ಸಬಲೀಕರಣ ಮಾಡುತ್ತಿದ್ದೀರಿ ಎಂದು ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಇಂತಹ ನಿಷೇಧಗಳನ್ನು ಹೇರಿರುವುದು ದುರದೃಷ್ಟಕರ … Continued

ಮುಂಬೈ ಕಾಲೇಜಲ್ಲಿ ಹಿಜಾಬ್ ಇತರ ಧಿರಿಸು ನಿಷೇಧ : ಸುಪ್ರೀಂ ಕೋರ್ಟಿಗೆ ಅರ್ಜಿ

ನವದೆಹಲಿ: ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬುರ್ಖಾ, ಹಿಜಾಬ್ ಅಥವಾ ನಿಖಾಬ್ ಧರಿಸುವುದನ್ನು ಮುಂಬೈನ ಚೆಂಬೂರ್ ಕಾಲೇಜ್‌ ನಿಷೇಧಿಸಿರುವುದನ್ನು ಎತ್ತಿಹಿಡಿದಿರುವ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆಗೆ ಒಪ್ಪಿಗೆ ನೀಡಿದೆ. ಚೆಂಬೂರಿನ … Continued

ಕಾಲೇಜಿನಲ್ಲಿ ಹಿಜಾಬ್‌ಗೆ ನಿಷೇಧ ಪ್ರಶ್ನಿಸಿದ್ದ ವಿದ್ಯಾರ್ಥಿಗಳ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಮುಂಬೈ: ತಮ್ಮ ಧರ್ಮ ಪ್ರತಿನಿಧಿಸುವ ಬುರ್ಖಾ, ನಖಾಬ್‌, ಪದಕ, ಟೊಪ್ಪಿಗೆ ಅಥವಾ ಸ್ಟೋಲ್‌ ರೀತಿಯ ಬಟ್ಟೆ ಧರಿಸುವುದಕ್ಕೆ ಕಾಲೇಜು ಆಡಳಿತ ಮಂಡಳಿ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಮುಂಬೈ ಕಾಲೇಜೊಂದರ ಒಂಬತ್ತು ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಕಾಲೇಜಿನ ನಿರ್ಧಾರದಲ್ಲಿ ತಾನು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್‌ ಮತ್ತು … Continued

ಮುಸ್ಲಿಂ ರಾಷ್ಟ್ರ ತಜಿಕಿಸ್ತಾನದಲ್ಲಿ ಹಿಜಾಬ್ ನಿಷೇಧ…!

 ದುಶಾನ್ಬೆ: ದೇಶದ ಸಂಸತ್ತಿನ ಮೇಲ್ಮನೆಯಲ್ಲಿ ಜೂನ್ 19ರಂದು ಹಿಜಾಬ್ ನಿಷೇಧಿಸುವ ವಿಧೇಯಕವನ್ನು ಅಂಗೀಕರಿಸಿದ ನಂತರ ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿರುವ ತಜಿಕಿಸ್ತಾನವು ಹಿಜಾಬ್‌ಗೆ ನಿಷೇಧ ಜಾರಿಗೆ ತರಲು ಸಜ್ಜಾಗಿದೆ. ತಜಿಕಿಸ್ತಾನದ ಜನಸಂಖ್ಯೆಯ ಸುಮಾರು 96%ರಷ್ಟು ಜನರು ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದಾರೆ. ತಜಿಕಿಸ್ತಾನದ ಸಂಸತ್ತಿನ ಮೇಲ್ಮನೆಯ 18 ನೇ ಅಧಿವೇಶನದಲ್ಲಿ ಹಿಜಾಬ್ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಏಷ್ಯಾ-ಪ್ಲಸ್ ವರದಿ … Continued

ಹಿಜಾಬ್ ವಿಚಾರ : ಸಿದ್ದರಾಮಯ್ಯ ಯಾವುದೇ ಒಂದು ಪಂಗಡದ ಮುಖ್ಯಮಂತ್ರಿಯಲ್ಲ ; ಪೇಜಾವರ ಶ್ರೀ

ಬೆಳಗಾವಿ : ಹಿಜಾಬ್ ಹಿಂಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪೇಜಾವರ ಶ್ರೀಗಳು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿವಿಧ ಗುಂಪುಗಳಿಗೆ ವಿಭಿನ್ನ ಕಾನೂನುಗಳನ್ನು ಜಾರಿಗೊಳಿಸುವುದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಇಂಥದ್ದನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಕರ್ನಾಟಕದ ಎಲ್ಲರಿಗೂ ಮುಖ್ಯಮಂತ್ರಿಯಾಗಿದ್ದಾರೆ. ಸಮಾಜದಲ್ಲಿ … Continued

ಹಿಜಾಬ್ ವಿವಾದದ ಬೆನ್ನಲ್ಲೇ ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ತೋರಿದ ಮುಸ್ಲಿಂ ಶಿಕ್ಷಣ ಸಂಸ್ಥೆಗಳು

ಮಂಗಳೂರು: ಹಿಜಾಬ್ ವಿವಾದದ  ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಮುಸ್ಲಿಮ್ ಆಡಳಿತ ಸಂಸ್ಥೆಗಳು ಪಿಯು ಕಾಲೇಜು ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ ಎಂದು ವರದಿಯಾಗಿದೆ. ಶಾಲಾ-ಕಾಲೇಜು ಮಾಡಿರುವ ನಿಯಮಗಳ ಅನ್ವಯ ಸಮವಸ್ತ್ರ ಧರಿಸುವುದು ಕಡ್ಡಾಯ, ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಇಲ್ಲ ಎಂದು ಸರ್ಕಾರ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದ ನಂತರ ಹಲವು ವಿದ್ಯಾರ್ಥಿನಿಯರು … Continued

ನಾಳೆಯೂ ಹಿಜಾಬ್‌ಗಾಗಿ ಹೈಡ್ರಾಮಾ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡ್ತೇವೆ: ಶಾಸಕ ರಘುಪತಿ ಭಟ್ ಎಚ್ಚರಿಕೆ

ಉಡುಪಿ: ಹೈಕೋರ್ಟ್‌ ಆದೇಶ ಮೀರಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಾಳೆಯೂ ಪಟ್ಟು ಹಿಡಿದರೆ ಅಂತಹ ವಿದ್ಯಾರ್ಥಿನಿಯರ ಮೇಲೆ ಕ್ರಿಮಿನಲ್ ಕೇಸ್ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಹೋರಾಟಗಾರ್ತಿಯರಿಬ್ಬರು ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್‌ ಕುರಿತು ಹೈಡ್ರಾಮಾ ಸೃಷ್ಟಿಸಿರುವುದದರ ಕುರಿತು … Continued