ಶಿಕ್ಷಕರಿಗೆ ಹಿಜಾಬ್ ಧರಿಸಲು ಅಡ್ಡಿ ಆರೋಪ: ಪರಿಶೀಲನೆ ನಂತರ ಆದೇಶ ಮಾಡ್ತೇನೆ ಎಂದ ಗೃಹ ಸಚಿವರು

ಬೆಂಗಳೂರು: ಹಿಜಾಬ್ ಧರಿಸಿದ ಕಾರಣಕ್ಕಾಗಿ ಶಿಕ್ಷಕರನ್ನು ತರಗತಿ ಒಳಗಡೆ ಬಿಡದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಿ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸುದ್ದಿ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಒಂದು ಆದೇಶ ಮಾಡುತ್ತೇವೆ ಎಂದು … Continued

ಹಿಜಾಬ್ ಕುರಿತು ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ: ಜಮೀರ್ ಅಹಮದ್ ಸ್ಪಷ್ಟನೆ

ಹುಬ್ಬಳ್ಳಿ: ಸೌಂದರ್ಯ ಕಾಣದಿರಲು ಹಾಗೂ ತಮ್ಮ ರಕ್ಷಣೆಗಾಗಿ ಹಿಜಾಬ್‍ ಧರಿಸುತ್ತಾರೆ ಎಂದಿದ್ದೆ. ಈ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಮಾಜಿ ಸಚಿವ ಜಮೀರ ಅಹ್ಮದ್ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಜಾಬ್ ಹಾಕದಿದ್ದರೆ ಅತ್ಯಾಚಾರ ಆಗುತ್ತದೆಯೆಂದು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಹೇಳಿಕೆ ತಪ್ಪಾಗಿ ಅರ್ಥಯಸಿ ಗೊಂದಲ … Continued

ಉಡುಪಿ: ಎಂಜಿಎಂ ಕಾಲೇಜಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಹಿಜಾಬ್-ಕೇಸರಿ ಶಾಲು ವಿವಾದ, ಕಾಲೇಜಿಗೆ ರಜೆ ಘೋಷಣೆ

ಉಡುಪಿ: ಉಡುಪಿಯಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಜೋರಾಗಿದ್ದು, ಹೈಕೋರ್ಟ್‌‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿರುವ ಮಧ್ಯೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದರೆ, ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದರಿಂದ ಉದ್ವಿಗ್ವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ಬಂದಿದ್ದು ಇದಕ್ಕೆ ಪ್ರತಿಯಾಗಿ ಕೇಸರಿ ಪೇಟ, ಕೇಸರಿ … Continued

ಕುಂದಾಪುರ: ಈಗ ಮತ್ತೊಂದು ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಉಡುಪಿ: : ಹಿಜಾಬ್‌ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತೆಲೆ ಇದ್ದು, ದಿನದಿಂದ ದಿನಕ್ಕೆ ಉಡುಪಿ ಜಿಲ್ಲೆಯ ಹೊಸ ಹೊಸ ಕಾಲೇಜುಗಳಲ್ಲಿ ಈ ವಿವಾದ ಹಬ್ಬುತ್ತಿದೆ. ಜಿಲ್ಲೆಯ ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು.ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಕೇಸರಿ … Continued

ಹಿಜಾಬ್‍ಗೆ ಅನುಮತಿ ನೀಡಲು ಒತ್ತಾಯಿಸಿ ಈಗ ನೀಲಿ ಶಾಲು ಧರಿಸಿ ಪ್ರತಿಭಟನೆ

ಚಿಕ್ಕಮಗಳೂರು: ಹಿಜಾಬ್ ವಿವಾದ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ನೀಲಿ ಶಾಲು ಧರಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ಐಡಿಎಸ್‍ಜಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ಹಿಜಾಬ್ ತೆಗೆಸಬಾರದು ಎಂದು ಆಗ್ರಹಿಸಿ ನೀಲಿ ಶಾಲು ಧರಿಸಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳು ಸಹ … Continued

ಕುಂದಾಪುರದಲ್ಲಿ ತೀವ್ರಗೊಂಡ ಹಿಜಾಬ್‌ ವಿವಾದ: ಬೇರೆ ಕಾಲೇಜುಗಳಿಗೂ ವಿಸ್ತರಣೆ.. ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಮೆರವಣಿಗೆ

ಉಡುಪಿ:ಕುಂದಾಪುರದಲ್ಲಿ ಹಿಜಾಬ್ ವಿವಾದ ಸಂಘರ್ಷ 4ನೇ ದಿನಕ್ಕೆ ಕಾಲಿಟ್ಟಿದ್ದು ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕುಂದಾಪುರದಲ್ಲಿ ಹಿಜಬ್ ವಿವಾದ ಮುಂದುವರೆದಿದ್ದು, ಹಿಜಾಬ್ ಧರಿಸುವುದನ್ನು ವಿರೋಧಿಸಿ ಆರ್. ಎನ್. ಶೆಟ್ಟಿ ಮತ್ತು ಬಂಡಾರ್ಕಾರ್ಸ್ ಕಾಲೇಜಿವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದಾಪುರದ ಆರ್‌.ಎನ್‌.ಶೆಟ್ಟಿ ಕಾಲೇಜಿಗೆ ಶನಿವಾರ ದಿಢೀರ್‌ ರಜೆ ಘೋಷಿಸಲಾಗಿದೆ ಎಂದು … Continued

ವಿಧಾನಸಭೆಗೆ ಹಿಜಾಬ್ ಧರಿಸಿಯೇ ಹೋಗ್ತೇನೆ, ಧೈರ್ಯವಿದ್ದರೆ ನನ್ನನ್ನು ತಡೆಯಲಿ: ಸರ್ಕಾರಕ್ಕೆ ಕಾಂಗ್ರೆಸ್ ಶಾಸಕಿ ಸವಾಲು

ಕಲಬುರಗಿ: ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಸಂಪ್ರದಾಯ, ಅದು ನಮ್ಮ ಹಕ್ಕು. ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ, ಧೈರ್ಯವಿದ್ದರೆ ತಡೆಯಲಿ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜಾ ಫಾತೀಮಾ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಹಿಜಾಬ್ ವಿರೋಧ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ … Continued

ಮುಂದುವರಿದ ಹಿಜಾಬ್‌ ವಿವಾದ: ಕುಂದಾಪುರ ಕಾಲೇಜಿಗೆ ನಾಳೆ ರಜೆ

ಉಡುಪಿ: ಕುಂದಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ ಮತ್ತು ಕೇಸರಿ ಶಲ್ಯ ವಿವಾದ ತಾರಕಕ್ಕೇರಿದ್ದು, ಕಾಲೇಜಿಗೆ ಶನಿವಾರ ರಜೆ ಘೋಷಿಸಲಾಗಿದೆ.  ಕಾಲೇಜಿನ ಪ್ರಾಂಶುಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ. ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಕಾಲೇಜಿನ ಮೈದಾನದ ವರೆಗೆ ಮಾತ್ರ ಬಿಟ್ಟುಕೊಂಡಿದೆ. ಆದರೆ ತಮ್ಮನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡುವಂತೆ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇಂದು, ಶುಕ್ರವಾರ ತರಗತಿಗೆ … Continued

ಶಾಲಾ-ಕಾಲೇಜುಗಳಿಗೆ ಯಾರೂ ಹಿಜಾಬ್, ಕೇಸರಿ ಶಾಲು ಧರಿಸಿ ಬರುವಂತಿಲ್ಲ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಧರ್ಮಾಚರಣೆಗೆ ಚರ್ಚ್, ಮಸೀದಿ, ಮಂದಿರಗಳಿವೆ. ಶಾಲೆಗಳಲ್ಲಿ ಹಿಜಾಬ್‌, ಕೇಸರಿ ಶಾಲು ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ‌. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಲೆಗಳಲ್ಲಾದರೂ ಮಕ್ಕಳು ದೇಶದ ಐಕ್ಯತೆ ಬಗ್ಗೆ ಸಂಸ್ಕಾರ ಪಡೆಯಬೇಕು. ಎಲ್ಲರೂ ಕೂಡಾ ಈ ಬಗ್ಗೆ … Continued

ಕುಂದಾಪುರ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜ್‌ ಒಳಗೆ ಪ್ರವೇಶ ನಿರಾಕರಣೆ

ಕುಂದಾಪುರ: ಉಡುಪಿ ಹಿಜಾಬ್ ವಿವಾದ ಈಗ ಕುಂದಾಪುರ ಸರಕಾರಿ ಕಾಲೇಜಿನಲ್ಲಿಯೂ ಪ್ರತಿಧ್ವನಿಸಿದ್ದು ಇಂದು, ಗುರುವಾರ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ತರಗತಿಗೆ ಪ್ರವೇಶ ನಿರಾಕರಿಸಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದಿದ್ದಾರೆ.ಸರ್ಕಾರದ ಸುತ್ತೋಲೆಯಂತೆ ಹಿಜಾಬ್‌ ಇಲ್ಲದೆ ತರಗತಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಈ … Continued