ಹಿಜಾಬ್ – ಕೇಸರಿ ಶಾಲು ವಿವಾದ: ಪರೀಕ್ಷೆ ತಪ್ಪಿಸಿಕೊಂಡರೆ ಬೇರೆ ಅವಕಾಶವಿಲ್ಲ ಎಂದ ಶಿಕ್ಷಣ ಸಚಿವರು

ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ಕಾರಣ ಮುಂದಿರಿಸಿ ಪರೀಕ್ಷೆ ತಪ್ಪಿಸಿಕೊಂಡರೆ, ಅವರಿಗೆ ಬೇರೆ ಅವಕಾಶ ನೀಡುವುದಿಲ್ಲ. ಹಿಂದೂ ಮಕ್ಕಳಿಗೂಇದು ಅನ್ವಯಿಸುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಪರೀಕ್ಷೆ ಬೇಕೆಂದರೆ ಹಿಜಾಬ್, ಕೇಸರಿ ಶಾಲು ತೆಗೆದು ಪರೀಕ್ಷೆ ಬರೆಯಬೇಕು. ಈ ಕಾರಣದಿಂದ ಪರೀಕ್ಷೆ ತಪ್ಪಿಸಿಕೊಂಡರೆ ಅವರಿಗೆ ಬೇರೆ ಅವಕಾಶ ನೀಡಲಾಗುವುದಿಲ್ಲ. ಹಿಜಾಬ್ ಗೆ ಈಗ ಹೈಕೋರ್ಟ್ ಮಧ್ಯಂತರ ಆದೇಶವಿದೆ. ಆದರೆ ಅದನ್ನೂ ಕೂಡಾ ಕೆಲವರು ವಿರೋಧಿಸಿದ್ದಾರೆ. ಇದಕ್ಕೆ ಪರವಾಗಿ ಕಾಂಗ್ರೆಸ್ ನವರು ಮಾತನಾಡುತ್ತಾರೆ. ಇದಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ನಡೆದ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಕರ್ಫ್ಯೂ ಜಾರಿಗೊಳಿಸಿದ ಹಿನ್ನಲೆಯಲ್ಲಿ ಇಂದು ಶಾಲೆಗಳು ಪ್ರಾರಂಭಿಸಿಲ್ಲ. ನಾಳೆಯಿಂದ ಯಥಾಸ್ಥಿತಿ ಕಾಯ್ದುಕೊಂಡು ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement