ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ 78 ವರ್ಷದ ವೃದ್ಧೆ..!

ಕಾನ್ಪುರ: ಆಘಾತಕಾರಿ ಘಟನೆಯೊಂದರಲ್ಲಿ 78 ವರ್ಷದ ವೃದ್ಧೆಯೊಬ್ಬಳು ತನ್ನ 82 ವರ್ಷದ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಲಿಸಿದ್ದಾರೆ.
ದ್ದು, ಉತ್ತರ ಪ್ರದೇಶ ಕಾನ್ಪುರ ನಗರದ ಚಕೇರಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ವೃದ್ಧೆಯ ದೂರಿನ ಮೇರೆಗೆ ಪೊಲೀಸರು ಮಹಿಳೆಯ ಪತಿ ಗಣೇಶ್ ನರೇನ್ ಶುಕ್ಲಾ ಮತ್ತು ಅವರ ಅಳಿಯ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳದ ಆರೋಪ ಹೊತ್ತಿರುವ ಗಣೇಶ್ ನಾರಾಯಣ್ ಶುಕ್ಲಾ ಅವರಿಗೆ ಸಪೋರ್ಟ್‌ ಇಲ್ಲದೆ ನಡೆಯಲು ಸಾಧ್ಯವಿಲ್ಲ. ವೃದ್ಧ ದಂಪತಿಯ ಪುತ್ರ ರಜನೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ತಾಯಿ ಎಲ್ಲಾ ಕುಟುಂಬ ಸದಸ್ಯರೊಂದಿಗೆ ಚೆನ್ನಾಗಿ ವರ್ತಿಸುತ್ತಾಳೆ ಮತ್ತು ಆದರೆ ಕೆಲವು ಸಂಬಂಧಿಕರ ಪ್ರಭಾವದಿಂದ ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಇಡೀ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದೆ. “ನನ್ನ ತಂದೆ ತನ್ನ ವಿರುದ್ಧ ವರದಕ್ಷಿಣೆಗಾಗಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದಾಗ ಆಘಾತಕ್ಕೊಳಗಾದರು” ಎಂದು ಮಗ ಹೇಳಿದರು.
ಇದೇ ವೇಳೆ ವಕೀಲ ಶಿವೇಂದ್ರ ಕುಮಾರ್ ಪಾಂಡೆ ಮಾತನಾಡಿ, ಬೆಳಕಿಗೆ ಬಂದಿರುವ ಅಂಶಗಳ ಪ್ರಕಾರ ವರದಕ್ಷಿಣೆ ಕಾನೂನನ್ನು ದುರುಪಯೋಗಪಡಿಸಿಕೊಂಡು ಕುಟುಂಬದ ಹಿರಿಯರನ್ನು ಸಿಲುಕಿಸಲಾಗಿದೆ. ಮದುವೆಯಾಗಿ ಇಷ್ಟು ವರ್ಷಗಳಾದ ನಂತರ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಅರ್ಥವಿಲ್ಲ. ಪ್ರಸ್ತುತ, ಈ ವಿಷಯವು ಮಧ್ಯಸ್ಥಿಕೆ ಕೇಂದ್ರದಲ್ಲಿದೆ, ಆದ್ದರಿಂದ ಎರಡು ಪಕ್ಷಗಳ ನಡುವಿನ ಪರಸ್ಪರ ಮಾತುಕತೆಯಿಂದ ವಿವಾದವನ್ನು ಇತ್ಯರ್ಥಪಡಿಸಬಹುದು ಎಂದು ಪಾಂಡೆ ಹೇಳಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement