ಹಿಮಪಾತದಲ್ಲಿ ಸಿಲುಕಿದ್ದ 7 ಸೈನಿಕರ ಮೃತದೇಹ ಪತ್ತೆ

ನವದೆಹಲಿ: ಅರುಣಾಚಲ ಪ್ರದೇಶದ ಪಶ್ಚಿಮ ತುದಿಯಲ್ಲಿರುವ ಕಮೆಂಗ್‌ನಲ್ಲಿನ ಎತ್ತರದ ಪ್ರದೇಶದಲ್ಲಿ ಭಾನುವಾರ ಉಂಟಾದ ಭಾರೀ ಹಿಮಪಾತದಲ್ಲಿ 7 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ.
ಹಿಮಪಾತದಲ್ಲಿ ಸಿಲುಕಿದ್ದ ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈಗ ಹಿಮಪಾತದಲ್ಲಿ ಸಿಲುಕಿದ್ದ 7 ಯೋಧರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.
ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ಏಳು ಭಾರತೀಯ ಸೇನಾ ಸಿಬ್ಬಂದಿಯ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.
ಹಿಮಪಾತದಲ್ಲಿ ಸಿಲುಕಿದ್ದ ಸೇನಾ ಸಿಬ್ಬಂದಿ ಗಸ್ತು ತಿರುಗುವ ತಂಡದ ಭಾಗವಾಗಿದ್ದರು. ಭಾನುವಾರ ಹಿಮಕುಸಿತದಿಂದ 7 ಸೈನಿಕರು ಅದರಲ್ಲಿ ಸಿಲುಕಿದ್ದರು.ಭಾನುವಾರದಂದು 14,500 ಅಡಿ ಎತ್ತರದ ಪ್ರದೇಶದಲ್ಲಿ ಅವರು ಹಿಮಪಾತಕ್ಕೆ ಒಳಗಾಗಿದ್ದರು. ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದಲ್ಲಿ ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಿತ್ತು ಎಂದು ಭಾರತೀಯ ಸೇನಾ ಅಧಿಕಾರಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಈ ಪ್ರದೇಶವು ಪ್ರತಿಕೂಲ ಹವಾಮಾನಕ್ಕೆ ಸಾಕ್ಷಿಯಾಗಿತ್ತು.
2020ರ ಮೇ ತಿಂಗಳಲ್ಲಿ ಸಿಕ್ಕಿಂನಲ್ಲಿ ಹಿಮಪಾತದಲ್ಲಿ ಗಸ್ತು ತಿರುಗುವಾಗ ಮತ್ತು ಹಿಮವನ್ನು ತೆರವುಗೊಳಿಸುವಾಗ ಇಬ್ಬರು ಸೈನಿಕರು ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement