ಪಂಜಾಬ್ ಚುನಾವಣೆ: ಕಾಂಗ್ರೆಸ್‌ ಹಿಂದಿಕ್ಕಿ ಎಎಪಿ ಅಧಿಕಾರಕ್ಕೆ ಬರುವ ಸಾಧ್ಯತೆ-ಟೈಮ್ಸ್ ನೌ-ವೀಟೊ ಸಮೀಕ್ಷೆ ಊಹೆ

ನವದೆಹಲಿ: ಮಂಗಳವಾರ (ಫೆಬ್ರವರಿ 8) ಪ್ರಕಟಿಸಲಾದ ಟೈಮ್ಸ್ ನೌ-ವೀಟೋ ಅಭಿಪ್ರಾಯ ಸಮೀಕ್ಷೆಯ ಪ್ರಕಾರ, 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ಊಹಿಸಿದೆ.
ಟೈಮ್ಸ್ ನೌ ಸಮೀಕ್ಷೆಯು ಭಗವಂತ್ ಮಾನ್ ಅವರನ್ನು ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಸರಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷವು ಫೆಬ್ರವರಿ 20ರಂದು ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 62 ರಿಂದ 66 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಊಹಿಸಿದೆ. ಪಂಜಾಬ್ ವಿಧಾನಸಭೆಯಲ್ಲಿ ಒಟ್ಟು 117 ಸ್ಥಾನಗಳಿವೆ. ಕಾಂಗ್ರೆಸ್ ಪಕ್ಷವು 41-44 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಶಿರೋಮಣಿ ಅಕಾಲಿದಳ ಕೇವಲ 8-11 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ ಎಂದೂ ಸಮೀಕ್ಷೆ ಹೇಳಿದೆ.
ಇತ್ತೀಚಿನ ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ 2022 ರ ಪಂಜಾಬ್ ಚುನಾವಣೆಯಲ್ಲಿ ತನ್ನ ಛಾಪು ಮೂಡಿಸುವ ಸಾಧ್ಯತೆಯಿಲ್ಲ. ಪಂಜಾಬ್ ಚುನಾವಣೆಗಾಗಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಮತ್ತು ಮೈತ್ರಿಕೂಟವು ಕೇವಲ 3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಹಾಗೂ ಪಕ್ಷೇತರರು ಸೇರಿದಂತೆ ಇತರರು 1 ರಿಂದ 2 ಸ್ಥಾನಗಳನ್ನು ಗಳಿಸಬಹುದು.
ಇದಲ್ಲದೆ, ಸಮೀಕ್ಷೆಯು, 2022 ರ ಪಂಜಾಬ್ ಚುನಾವಣೆಗಳಲ್ಲಿ AAP 44.61 ಶೇಕಡಾ ಮತಗಳನ್ನು ಗಳಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಕಾಂಗ್ರೆಸ್ ಶೇಕಡಾ 33.53 ರಷ್ಟು ಮತಗಳನ್ನು ಗಳಿಸಬಹುದು ಎಂದು ಹೇಳಿದೆ.
ಬಿಜೆಪಿ ಮೈತ್ರಿಕೂಟವು ಕೇವಲ 3.99 ಶೇಕಡಾ ಮತಗಳ ಹಂಚಿಕೆಯೊಂದಿಗೆ ನಾಶವಾಗುವ ಸಾಧ್ಯತೆಯಿದೆ ಮತ್ತು ಶಿರೋಮಣಿ ಅಕಾಲಿದಳ (SAD) ಪಂಜಾಬ್ ಚುನಾವಣೆಯಲ್ಲಿ ಒಟ್ಟು ಮತಗಳ 13.25 ಶೇಕಡಾವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮುಂಬರುವ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಹೆಸರಿಸಿದೆ.
ರಾಜ್ಯದಲ್ಲಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆರಂಭದಲ್ಲಿ ಫೆಬ್ರವರಿ 14 ರಂದು ಚುನಾವಣೆಯನ್ನು ನಿಗದಿಪಡಿಸಲಾಗಿತ್ತು ಆದರೆ ರಾಜ್ಯದ ರಾಜಕೀಯ ಪಕ್ಷಗಳ ಮನವಿಯ ನಂತರ ಚುನಾವಣಾ ಆಯೋಗವು ದಿನಾಂಕವನ್ನು ಬದಲಾಯಿಸಿತು.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement