ಭಾರತ-ಪಾಕ್ ಗಡಿಯಲ್ಲಿ ಸ್ಫೋಟಕ ಎಸೆದ ಡ್ರೋನ್​; ಬಿಎಸ್​ಎಫ್ ಯೋಧರಿಂದ ಗುಂಡಿನ ದಾಳಿ

ಅಮೃತಸರ: ಪಂಜಾಬ್‌ನ ಅಮೃತಸರದ ಪಂಜ್‌ಗ್ರಾಹಿಯನ್ ಗಡಿಯ ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ಡ್ರೋನ್ ಮೂಲಕ ಸ್ಫೋಟಕಗಳನ್ನು ಎಸೆಯಲಾಗಿದ್ದು, ಭಾರತೀಯ ಗಡಿ ಭದ್ರತಾ ಪಡೆಯ (BSF) ಯೋಧರು ಭಯೋತ್ಪಾದಕರ ಸ್ಫೋಟದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.
ಸ್ಫೋಟಕಗಳು ಕೆಳಗೆ ಬೀಳುತ್ತಿದ್ದಂತೆ ಕೂಡಲೇ ಎಚ್ಚೆತ್ತ ಯೋಧರು ಡ್ರೋನ್‌ನತ್ತ ಗುಂಡು ಹಾರಿಸಿದ್ದಾರೆ. ಬಳಿಕ ಆ ಡ್ರೋನ್ ಪಾಕಿಸ್ತಾನದ ಕಡೆಗೆ ಹಾರಿದೆ.ಈ ಘಟನೆಯ ನಂತರ, ತಕ್ಷಣವೇ ಬಿಎಸ್‌ಎಫ್ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಎರಡು ಸ್ಥಳಗಳಲ್ಲಿ ಸ್ಫೋಟಕಗಳು ಮತ್ತು ಪಿಸ್ತೂಲ್ ಪತ್ತೆಯಾಗಿದೆ.
ಮಂಗಳವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಬರುವ ಡ್ರೋನ್​​ನ ಶಬ್ದ ಕೇಳಿದ ನಂತರ ಸೇನಾ ಪಡೆ ಸಿಬ್ಬಂದಿ ಡ್ರೋನ್‌ನತ್ತ ಗುಂಡು ಹಾರಿಸಿದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ರಾಮ ಘಗ್ಗರ್ ಮತ್ತು ಸಿಂಗೊಕೆ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಹಳದಿ ಬಣ್ಣದ ಎರಡು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಡ್ರೋನ್​ನಿಂದಲೇ ಆ ಪ್ಯಾಕೆಟ್‌ಗಳನ್ನು ಬೀಳಿಸಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.
ಪ್ಯಾಕೆಟ್‌ನಲ್ಲಿ ಪಿಸ್ತೂಲ್ ಸುತ್ತಿಕೊಂಡಿರುವುದು ಕಂಡುಬಂದಿದ್ದು, ಗಡಿಯ ಬೇಲಿಯಿಂದ ಸುಮಾರು 2.7 ಕಿಮೀ ದೂರದಲ್ಲಿ ಈ ವಸ್ತು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತದೊಳಕ್ಕೆ ಸ್ಫೋಟಕಗಳು, ಶಸ್ತ್ರಾಸ್ತ್ರಗಳು, ನಗದು ಮತ್ತು ಮಾದಕವಸ್ತುಗಳನ್ನು ಕಳುಹಿಸಲು ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳು ಡ್ರೋನ್‌ಗಳನ್ನು ನಿಯಮಿತವಾಗಿ ಬಳಸುತ್ತವೆ. ಭದ್ರತಾ ಪಡೆಗಳು ಹೆಚ್ಚು ಜಾಗರೂಕರಾಗಿವೆ, ಆದರೂ ಆಗಾಗ್ಗೆ ಇಂಥ ಘಟನೆಗಳು ನಡೆಯುತ್ತವೆ.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement