ಕರ್ನಾಟಕದಲ್ಲಿ ಗುರುವಾರ ಹೊಸದಾಗಿ 5,019 ಸೋಂಕು ದಾಖಲು, 39 ಜನರು ಸಾವು

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಗುರುವಾರ ಹೊಸದಾಗಿ 5,019 ಕೊರೊನಾ ಸೋಂಕುಗಳು ದಾಖಲಾಗಿವೆ. ಇದೇವೇಳೆರಾಜ್ಯದಲ್ಲಿ 39 ಮರಣ ಪ್ರಕರಣ ದಾಖಲಾಗಿದೆ.

ನಿನ್ನೆ 5,339 ಸೋಂಕು ದಾಖಲಾಗಿತ್ತು. ಇಂದು ಗುರುವಾರ ರಾಜ್ಯದಲ್ಲಿ ಒಟ್ಟು 13,923 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕಾರಾತ್ಮಕ ದರ 4.25%ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 52,013 ಕುಸಿತವಾಗಿದೆ. ಬೆಂಗಳೂರಿನಲ್ಲಿ ಒಟ್ಟು 2,315 ಹೊಸ ಸೋಂಕು ಪತ್ತೆಯಾಗಿದ್ದು, ಇಂದು 17 ಮರಣ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಕೋವಿಡ್-19 ಮರಣ ಪ್ರಮಾಣ ಶೇ.0.77% ರಷ್ಟಿದೆ. ಬೆಂಗಳೂರಿನಲ್ಲಿ ಇಂದು ಹೊಸದಾಗಿ 2,315 ಹೊಸ ಸೋಂಕುಗಳು ಪತ್ತೆಯಾಗಿದ್ದು, 17 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 32, ಬಳ್ಳಾರಿ 220, ಬೆಳಗಾವಿ 196, ಬೆಂಗಳೂರು ಗ್ರಾಮಾಂತರ 52, ಬೆಂಗಳೂರು ನಗರ 2,315, ಬೀದರ್ 26, ಚಾಮರಾಜನಗರ 83, ಚಿಕ್ಕಬಳ್ಳಾಪುರ 47, ಚಿಕ್ಕಮಗಳೂರು 31, ಚಿತ್ರದುರ್ಗ 94, ದಕ್ಷಿಣ ಕನ್ನಡ 90, ದಾವಣಗೆರೆ 44, ಧಾರವಾಡ 124, ಗದಗ 20, ಹಾಸನ 101, ಹಾವೇರಿ 49, ಕಲಬುರಗಿ 96, ಕೊಡಗು 171, ಕೋಲಾರ 58, ಕೊಪ್ಪಳ 45, ಮಂಡ್ಯ 117, ಮೈಸೂರು 261, ರಾಯಚೂರು 87, ರಾಮನಗರ 26, ಶಿವಮೊಗ್ಗ 141, ತುಮಕೂರು 234, ಉಡುಪಿ 78, ಉತ್ತರ ಕನ್ನಡ 76, ವಿಜಯಪುರ 88 ಮತ್ತು ಯಾದಗಿರಿಯಲ್ಲಿ 17 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement