ಕರ್ನಾಟಕದಲ್ಲಿ 4 ಸಾವಿರಕ್ಕಿಂತ ಕಡಿಮೆ ಬಂದ ದೈನಂದಿನ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು, ಶುಕ್ರವಾರ ಹೊಸದಾಗಿ 3,976 ಕೊರೊನಾ ಸೋಂಕು ದಾಖಲಾಗಿದೆ. ಇದೇವೇಳೆ 41 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. .

ರಾಜ್ಯದಲ್ಲಿ ಒಟ್ಟು 11,377 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ರೇಟ್ 3.47%ಕ್ಕೆ ಇಳಿಕೆ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 44,571ಕ್ಕೆ ಇಳಿದಿದೆ. ನಿನ್ನೆ 5,019 ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ ಒಟ್ಟು 1,725 ಹೊಸ ಕೇಸ್ ಪತ್ತೆಯಾಗಿದ್ದು, ಇಂದು 11 ಮರಣ ಪ್ರಕರಣ ದಾಖಲಾಗಿದೆ.
ಜಿಲ್ಲಾವಾರು ಸೋಂಕಿನ ಮಾಹಿತಿ…
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 19, ಬಳ್ಳಾರಿ 139, ಬೆಳಗಾವಿ 316, ಬೆಂಗಳೂರು ಗ್ರಾಮಾಂತರ 33, ಬೆಂಗಳೂರು ನಗರ 1,725, ಬೀದರ್ 27, ಚಾಮರಾಜನಗರ 87, ಚಿಕ್ಕಬಳ್ಳಾಪುರ 48, ಚಿಕ್ಕಮಗಳೂರು 36, ಚಿತ್ರದುರ್ಗ 88, ದಕ್ಷಿಣ ಕನ್ನಡ 91, ದಾವಣಗೆರೆ 19, ಧಾರವಾಡ 127, ಗದಗ 34, ಹಾಸನ 78, ಹಾವೇರಿ 31, ಕಲಬುರಗಿ 55, ಕೊಡಗು 127, ಕೋಲಾರ 36, ಕೊಪ್ಪಳ 17, ಮಂಡ್ಯ 65, ಮೈಸೂರು 226, ರಾಯಚೂರು 16, ರಾಮನಗರ 31, ಶಿವಮೊಗ್ಗ 137, ತುಮಕೂರು 194, ಉಡುಪಿ 74, ಉತ್ತರ ಕನ್ನಡ 49, ವಿಜಯಪುರ 33 ಮತ್ತು ಯಾದಗಿರಿಯಲ್ಲಿ 18 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement