ಕಾರವಾರ: ಕೆಡಿಪಿ ಸಭೆಯಲ್ಲಿ ಸಚಿವದ್ವಯರ ಸಮ್ಮುಖದಲ್ಲೇ ಬಿಜೆಪಿ ಶಾಸಕರಿಬ್ಬರ ವಾಕ್ಸಮರ..!

ಕಾರವಾರ: ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರೆದುರೇ ಬಿಜೆಪಿ ಶಾಸಕರು ಪರಸ್ಪರ ವಾಗ್ವಾದ ಮಾಡಿಕೊಂಡ ವಿದ್ಯಮಾನ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರಾದ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲೇ ನೆರೆ ಪರಿಹಾರ ಅನುದಾನ ವಿಚಾರಕ್ಕಾಗಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಕುಮಟಾ-ಹೊನ್ನಾವರ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ನಡುವೆ ಜೋರಾಗಿ ವಾಗ್ವಾದ ನಡೆದಿದೆ.

ಕಾರವಾರಕ್ಕೆ ಕಡಿಮೆ ಅನುದಾನ ದೊರಕಿದೆ ಎಂದು ಶಾಸಕಿ ರೂಪಾಲಿ ನಾಯ್ಕ್ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈಸಲ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ನದಿ ದಾಟಿ ತೆರಳದಂತಹ ಪರಿಸ್ಥಿತಿಯಿದೆ. ತೌಕ್ತೆ ಚಂಡಮಾರುತದ ಸಂದರ್ಭ ಹಾನಿಗೊಳಗಾದ ಪ್ರದೇಶದ ಪೈಕಿ ಕುಮಟಾಕ್ಕೆ ಮಾತ್ರ ಹೆಚ್ಚು ಅನುದಾನ ನೀಡಲಾಗಿದೆ ಎಂದು ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ್ ಅಸಮಾಧನ ವ್ಯಕ್ತಪಡಿಸಿದರು.
ಆಗ ಆಕ್ಷೇಪಿಸಿದ ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ, ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಬೇಡಿ. ನಿಮ್ಮ ಕ್ಷೇತ್ರದಷ್ಟೇ ಮಾತನಾಡಿ. ಸರ್ಕಾರದಿಂದ ನೀವೂ ಕೋಟಿ ರೂ. ಅನುದಾನ ತರ್ತೀರಿ, ನೀವು ಹೀಗೆಲ್ಲ ಮಾತನಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಶಾಸಕರಿಬ್ಬರ ವಾಗ್ವಾದ ಜೋರಾಯಿತು. ಆಗ ಮಧ್ಯಪ್ರವೇಶಿಸಿದ ಸಚಿವ ಶಿವರಾಮ ಹೆಬ್ಬಾರ್‌ ಅವರು, ನೀವು ಸರ್ಕಾರದ ಪ್ರತಿನಿಧಿಗಳಿದ್ದೀರಿ, ಸಭೆಯಲ್ಲೆಲ್ಲ ಅನುದಾನದ ಬಗ್ಗೆ ಮಾತನಾಡಬೇಡಿ, ಈ ವಿಚಾರ ಐಬಿಯಲ್ಲಿ ಮಾತನಾಡಿ ಎಂದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ನಾನು ಜಗಳ ಮಾಡುತ್ತಿಲ್ಲ, ನೆರೆ ಪರಿಹಾರಕ್ಕೆ ಸರ್ಕಾರದಿಂದ 100 ಕೋಟಿ ರೂ. ಬಂದಿತ್ತು. ಆದರೆ, ನನ್ನ ಕ್ಷೇತ್ರಕ್ಕೆ ಕೇವಲ 5 ಕೋಟಿ ರೂ.‌ ನೀಡಲಾಗಿದೆ. ಇದನ್ನು ತೆಗೆದುಕೊಂಡು ಜನರಿಗೆ ಏನು ಉತ್ತರ ನೀಡಲಿ..? ಅನುದಾನ ಹೆಚ್ಚಳ ಮಾಡಲು ಜಿಲ್ಲಾಧಿಕಾರಿ ಬಳಿಯೂ ಮನವಿ ಮಾಡಿದ್ದೆ. ಆದರೆ ಅದು ಬರಲಿಲ್ಲ ಎಂದು ಸಚಿವರಿಗೆ ರೂಪಾಲಿ ನಾಯ್ಕ್‌ ತಿಳಿಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement