ನಾನು ಹಿಜಾಬ್-ಬುರ್ಖಾ ಪರ ಇಲ್ಲ, ಆದರೆ ಹುಡುಗಿಯರ ಸಣ್ಣ ಗುಂಪನ್ನು ಬೆದರಿಸುವ ಗೂಂಡಾಗಿರಿಯೂ ಖಂಡನೀಯ: ಜಾವೇದ್‌ ಅಖ್ತರ್

ಮುಂಬೈ: ಹಿರಿಯ ಚಲನಚಿತ್ರ ಬರಹಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಕರ್ನಾಟಕದಲ್ಲಿ ನಡೆಯುತ್ತಿರುವ ‘ಹಿಜಾಬ್ ವಿವಾದ ಕುರಿತು ಟ್ವೀಟ್‌ ಮಾಡಿದ್ದು, ನಾನು ಹಿಜಾಬ್ ಅಥವಾ ಬುರ್ಖಾದ ಪರವಾಗಿಲ್ಲ ಎಂದು ಹೇಳಿದ್ದಾರೆ, “ಇದೇವೇಳೆ ಹುಡುಗಿಯರ ಸಣ್ಣ ಗುಂಪನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಪುರುಷರ ಗುಂಪಿನ ಗೂಂಡಾ ವರ್ತನೆ ಬಗ್ಗೆ ನನ್ನ ತೀವ್ರ ಖಂಡನೆಯಿದೆ ಎಂದು ಹೇಳಿದ್ದಾರೆ.
ಹಿಜಾಬ್ ವಿವಾದ ಕರ್ನಾಟಕದಲ್ಲಿ ದೊಡ್ಡ ಬಿಕ್ಕಟ್ಟನ್ನು ಉಂಟುಮಾಡಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಯ ವಿಷಯವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಜಾವೇದ್‌ ಅಖ್ತರ್, “ನಾನು ಯಾವತ್ತೂ ಹಿಜಾಬ್ ಅಥವಾ ಬುರ್ಖಾ ಪರವಾಗಿಲ್ಲ. ನಾನು ಈಗಲೂ ಅದಕ್ಕೆ ಬದ್ಧನಾಗಿದ್ದೇನೆ ಆದರೆ ಅದೇ ಸಮಯದಲ್ಲಿ ಸಣ್ಣ ಗುಂಪಿನ ಹುಡುಗಿಯರನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಈ ಗುಂಪಿನ ಬಗ್ಗೆ ನನಗೆ ತಿರಸ್ಕಾರವಿದೆ. ಅವರ ಪ್ರಯತ್ನ ವಿಫಲವಾಗಿದೆ ಎಂದು ಬರೆದಿದ್ದಾರೆ.

ಕಳೆದ ತಿಂಗಳು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನಿರಾಕರಿಸಿದ್ದರಿಂದ ಹಿಜಾಬ್ ಗಲಾಟೆ ಆರಂಭವಾಗಿದೆ. ಹಿಜಾಬ್ ಇಲ್ಲದೇ ಬರುತ್ತಿದ್ದ ವಿದ್ಯಾರ್ಥಿಗಳು ದಿಢೀರ್ ಹಿಜಾಬ್ ಧರಿಸಿ ಬರಲು ಆರಂಭಿಸಿದ್ದಾರೆ ಎಂದು ಕಾಲೇಜು ಅಧಿಕಾರಿಗಳು ಹೇಳಿದ್ದಾರೆ. ನಂತರ ವಿದ್ಯಾರ್ಥಿಗಳು ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗಲು ನಿರಾಕರಿಸಿ ಪ್ರತಿಭಟನೆ ನಡೆಸಿದರು. ಹಿಜಾಬ್ ಧರಿಸಿದ ಹುಡುಗಿಯರು ಮತ್ತು ಕೇಸರಿ ತೊಟ್ಟ ಹುಡುಗರ ನಡುವಿನ ಮುಖಾಮುಖಿಯ ನಂತರ ರಾಜ್ಯದ ಶಿಕ್ಷಣ ಸಂಸ್ಥೆಗಳು ಉದ್ವಿಗ್ನ ಕ್ಷಣಗಳಿಗೆ ಸಾಕ್ಷಿಯಾಗಿವೆ. ಈ ವಿಚಾರ ವಿವಾದವಾಗಿ ಬೇರೆ ಜಿಲ್ಲೆಗಳಿಗೂ ಹಬ್ಬಿತ್ತು. ನಡೆಯುತ್ತಿರುವ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ದೆಹಲಿ, ಕೋಲ್ಕತ್ತಾ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಕಳೆದ ವಾರ, ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ತನ್ನ ವಿದ್ಯಾರ್ಥಿಗಳಿಗೆ ತಾನು ನಿಗದಿಪಡಿಸಿದ ಸಮವಸ್ತ್ರ ಅಥವಾ ಖಾಸಗಿ ಸಂಸ್ಥೆಗಳ ಆಡಳಿತವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement