ಬಿಕಿನಿ ಬೀಚಿಗೆ ವಿನಃ ಕಾಲೇಜಿಗಲ್ಲ, ಎಲ್ಲದಕ್ಕೂ ಡ್ರೆಸ್ ಕೋಡ್ ಇರುತ್ತದೆ: ಸುಮಲತಾ ಅಂಬರೀಶ

ಬೆಂಗಳೂರು : ಪ್ರತಿ ಸ್ಥಳಕ್ಕೂ ಅದರದ್ದೇ ಆದ ಡ್ರೆಸ್ ಕೋಡ್ ಇರುತ್ತದೆ. ನೀವು ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್​ನಲ್ಲಿ ಬಿಕಿನಿ ಧರಿಸಬಹುದು. ಆದ್ರೆ, ಅದನ್ನ ಶಾಲೆಯಲ್ಲಿ ಧರಿಸಲು ಸಾಧ್ಯವಿಲ್ಲ” ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್‌ ನಾಯಕ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ ಅವರು “ನಾವು ಯಾವ ಉಡುಗೆ ಧರಿಸಬೇಕು ಅನ್ನುವುದನ್ನು ನಮ್ಮ ಹಕ್ಕು ಎಂಬುದನ್ನು ಒಪ್ಪಲೇಬೇಕು. ಆದ್ರೆ, ನೀವು ಬಿಕಿನಿಯನ್ನ ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಧರಿಸುತ್ತೇವೆಯೇ ಅದನ್ನು ಶಾಲೆ- ಕಾಲೇಜಿನಲ್ಲಿ ಅದನ್ನು ಧರಿಸಲು ಸಾಧ್ಯವಿಲ್ಲ. ನೀವು ಕೆಲಸ ಮಾಡುವ ಜಾಗದಲ್ಲಿ ಕೆಲವೊಮ್ಮೆ ಜೀನ್ಸ್ ಬಳಸಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಅಲ್ಲಿ ನೀವು ಕೆಲಸ ಮಾಡುವ ಕಂಪನಿ ಅಥವಾ ಏನು ನಿಗದಿ ಪಡಿಸುತ್ತದೆಯೋ ಅದನ್ನ ಧರಿಸಬೇಕಾಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಎಲ್ಲ ಕಡೆಯೂ ಡ್ರೆಸ್ ಕೋಡ್ ಇರುತ್ತದೆ ಹಾಗೂ ನಾವು ಅದನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು “ತಾನು ಏನು ಧರಿಸಬೇಕು ಅಂತಾ ನಿರ್ಧರಿಸುವುದು ಮಹಿಳೆಯ ಹಕ್ಕು. ಅದು ಬಿಕಿನಿಯಾಗಿರಲಿ, ಘೂಂಗ್‌ಹಾಟ್ ಆಗಿರಲಿ, ಜೀನ್ಸ್ ಆಗಿರಲಿ ಅಥವಾ ಹಿಜಾಬ್ ಆಗಿರಲಿ. ಈ ರೀತಿ ವಿನಾಕಾರಣ ಉಡುಗೆಯ ವಿಚಾರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದರು.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement