ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ

ಹೊಸಪೇಟೆ : ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡುವವರು ಬರ್ಮುಡ, ಜೀನ್ಸ್ ಚಡ್ಡಿ ಧರಿಸುವಂತಿಲ್ಲ. ವಿರೂಪಾಕ್ಷನ ದರ್ಶನ‌ ಪಡೆಯಲು ಸಾಂಪ್ರದಾಯಿಕ ಉಡುಗೆ ಕಡ್ಡಾಯ. ಬರ್ಮುಡ, ಜೀನ್ಸ್‌ ಚಡ್ಡಿ ಧರಿಸಿ ಬಂದರೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಪಂಚೆ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದರೆ ಮಾತ್ರ ದೇವರ ದರ್ಶನಕ್ಕೆ … Continued

ನಿಗಮ, ಮಂಡಳಿ ನೇಮಕಾತಿ ಪರೀಕ್ಷೆ : ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ನಿಗದಿಪಡಿಸಿ ಕೆಇಎ ಆದೇಶ

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ವಿವಿಧ ನಿಗಮ ಮತ್ತು ಮಂಡಳಿಗಳ ನೇಮಕಾತಿ ಪರೀಕ್ಷೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್‌ಫೋನ್‌ಗಳು, ಮೈಕ್ರೊಫೋನ್‌ಗಳು, ಬ್ಲೂಟೂತ್ ಸಾಧನಗಳು ಮತ್ತು ಕೈಗಡಿಯಾರಗಳನ್ನು ಒಳಗೊಂಡಿರುವ ನಿಷೇಧಿತ ವಸ್ತುಗಳ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ. … Continued

ಬಿಕಿನಿ ಬೀಚಿಗೆ ವಿನಃ ಕಾಲೇಜಿಗಲ್ಲ, ಎಲ್ಲದಕ್ಕೂ ಡ್ರೆಸ್ ಕೋಡ್ ಇರುತ್ತದೆ: ಸುಮಲತಾ ಅಂಬರೀಶ

ಬೆಂಗಳೂರು : ಪ್ರತಿ ಸ್ಥಳಕ್ಕೂ ಅದರದ್ದೇ ಆದ ಡ್ರೆಸ್ ಕೋಡ್ ಇರುತ್ತದೆ. ನೀವು ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್​ನಲ್ಲಿ ಬಿಕಿನಿ ಧರಿಸಬಹುದು. ಆದ್ರೆ, ಅದನ್ನ ಶಾಲೆಯಲ್ಲಿ ಧರಿಸಲು ಸಾಧ್ಯವಿಲ್ಲ” ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್‌ ನಾಯಕ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ ಅವರು “ನಾವು … Continued