ಹಿಜಾಬ್- ಕೇಸರಿ ವಿವಾದ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ದ: ಹೊರಟ್ಟಿ

ಹುಬ್ಬಳ್ಳಿ: ಹಿಜಾಬ್- ಕೇಸರಿ ವಿವಾದ ರಾಜಕೀಯಮಯವಾಗಿದ್ದು, ಸಮಸ್ಯೆ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಈ ಸಮಸ್ಯೆ ಬಗೆಹರಿಸುವಲ್ಲಿ ಎಡವಿದೆ. ಅದು ತನ್ನ ಜವಾಬ್ದಾರಿಯಿಂದ ಹೊರಳಿಗದೆ‌. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದ ಅವರು ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟದ್ದು ಸರಿಯಾದ ನಿರ್ಧಾರವಲ್ಲ ಎಂದರು.
ಯಾರೇ ಇರಲಿ ಮಕ್ಕಳ ಜೊತೆ ರಾಜಕೀಯ ಮಾಡಬಾರದು. ಕೆಲ ಸಂಘಟನೆಗಳು ರಾಜಕೀಯ ನಾಯಕರ ಸಂಬಂಧಿಗಳು ಇದ್ದಹಾಗೆ. ಕುಮ್ಮಕ್ಕು ಕೊಟ್ಟು ಈ ರೀತಿ ಮಾಡಲಾಗುತ್ತಿದೆ. ಸಮಾಜದಲ್ಲಿ ಜವಾಬ್ದಾರಿ ಇರುವವರು ಇವರು ರಾಜ್ಯದ ಮಕ್ಕಳು ಎನ್ನುವುದನ್ನು ಮರೆತು, ಹೊಲಸು ರಾಜಕೀಯಕ್ಕೆ ಇಳಿದಿದ್ದಾರೆ. ರೀತಿ ಮಾಡುವುದು ಒಂದೇ, ಕೊಲೆ ಮಾಡುವುದು ಎರಡೂ ಒಂದೇ. ನ್ಯಾಯಾಲಯದಿಂದ ಯಾವುದೇ ತೀರ್ಮಾನ ಆದರೂ ಮಕ್ಕಳಲ್ಲಿ ಈ ವಿಷ ಹಾಗೆಯೇ ಇರಲಿದೆ.ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಉಸ್ತುವಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸು ಅಂದರೆ ನನಗೆ ಹೇಳಿದರೆ ಮಾಡಲು ನಾನು ಸಿದ್ಧ. ಪೋಷಕರು, ಕಾಲೇಜು ಆಡಳಿತ ಮಂಡಳಿ, ಶಿಕ್ಷಣ ಸಚಿವರ ಜೊತೆ ಸಭೆ ಮಾಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳಂಥವರು ನನಗೆ ಹೇಳಿದರೆ ಮಾಡುತ್ತೇನೆ. ರಾಜ್ಯದಲ್ಲಿ ಸೌಹಾರ್ದ ವಾತಾವರಣ ಮೂಡಬೇಕು ಎಂದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement