ನನಗೆ ಅಧಿಕಾರ ಕೊಟ್ಟಿದ್ದು ಶಿಕ್ಷಕ ಸಮುದಾಯ, ಅವರಿಗೆಂದೂ ಅನ್ಯಾಯ ಮಾಡಲು ಬಿಡುವುದಿಲ್ಲ: ಸಭಾಪತಿ ಹೊರಟ್ಟಿ

ಧಾರವಾಡ : ಕಳೆದ ನಲವತ್ತೆರಡು ವರ್ಷಗಳ ಹಿಂದೆ ಶಿಕ್ಷಕ ಸಮುದಾಯ ನನ್ನ ಕೈಗೆ ಅಧಿಕಾರವನ್ನು ಕೊಟ್ಟರು. ಅಂದಿನಿಂದ ಇಂದಿನ ವರೆಗೂ ನನಗೆ ಅಧಿಕಾರ ಕೊಟ್ಟ ಶಿಕ್ಷಕ ಸಮುದಾಯದವರಿಗೆ ನಾನೆಂದೂ ಕೈಕೊಟ್ಟಿಲ್ಲ, ಅನ್ಯಾಯ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇಲ್ಲಿಯ ಜನತಾ ಶಿಕ್ಷಣ ಸಮಿತಿಯ (ಜೆ.ಎಸ್.ಎಸ್) ಪರವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ … Continued

ವಿಜ್ಞಾನ ಕಲಿಕೆಗೆ ನೀಡುವ ಒತ್ತು ಇತಿಹಾಸದ ಸಂಶೋಧನೆ-ಅಧ್ಯಯನಕ್ಕೂ ಸಿಗಬೇಕಿದೆ: ಹೊರಟ್ಟಿ

posted in: ರಾಜ್ಯ | 0

ಧಾರವಾಡ : ಇತಿಹಾಸ ಸಂಶೋಧನೆಯಲ್ಲಿ ಯುವಕ ಸಂಶೋಧಕರು ಹೆಚ್ಚು ತೊಡಗಿಸಿಕೊಳ್ಳಬೇಕು. ಕೇವಲ ವಿಜ್ಞಾನದ ಕಲಿಕೆಗೆ ಒತ್ತುಕೊಡುವ ಪರಿಸ್ಥಿತಿ ಹಾಗೂ ಮನಸ್ಥಿತಿ ಇಂದು ಪಾಲಕರಲ್ಲಿ ಕಂಡುಬರುತ್ತಿದೆ. ಅದೇರೀತಿ ಇತಿಹಾಸದ ಸಂಶೋಧನೆ ಹಾಗೂ ಅಧ್ಯಯನದ ಬಗ್ಗೆಯೂ ಮಹತ್ವ ನೀಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಬೆಂಗಳೂರಿನ ಕರ್ನಾಟಕ ಇತಿಹಾಸ ಪರಿಷತ್ತು, ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ … Continued

ವಿಧಾನ ಪರಿಷತ್ ಚುನಾವಣೆ: ಮೂವರು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಒಂದು ಕ್ಷೇತ್ರಕ್ಕೆ ಹೆಸರು ಪ್ರಕಟಿಸದ ಬಿಜೆಪಿ

posted in: ರಾಜ್ಯ | 0

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೂವರು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರ- ಅರುಣ್ ಶಹಾಪುರ (ಹಾಲಿ ಸದಸ್ಯ), ವಾಯವ್ಯ ಪದವೀಧರ ಕ್ಷೇತ್ರ – ಹನುಮಂತ ನಿರಾಣಿ (ಹಾಲಿ ಸದಸ್ಯ)ದಕ್ಷಿಣ ಪದವೀಧರ ಕ್ಷೇತ್ರ -ಎಂ.ವಿ.ರವಿಶಂಕರ್ ಅವರ ಹೆಸರನ್ನು ಬಿಡುಗಡೆ ಮಾಡಿದೆ. ಗೋ.ಮಧುಸೂದನ ಅವರಿಗೆ ಈ ಬಾರಿಯೂ ಟಿಕೆಟ್ ನೀಡಿಲ್ಲ. … Continued

ಹಿಜಾಬ್- ಕೇಸರಿ ವಿವಾದ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ದ: ಹೊರಟ್ಟಿ

posted in: ರಾಜ್ಯ | 0

ಹುಬ್ಬಳ್ಳಿ: ಹಿಜಾಬ್- ಕೇಸರಿ ವಿವಾದ ರಾಜಕೀಯಮಯವಾಗಿದ್ದು, ಸಮಸ್ಯೆ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಈ ಸಮಸ್ಯೆ ಬಗೆಹರಿಸುವಲ್ಲಿ ಎಡವಿದೆ. ಅದು ತನ್ನ ಜವಾಬ್ದಾರಿಯಿಂದ ಹೊರಳಿಗದೆ‌. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದ ಅವರು ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟದ್ದು … Continued

ಡಿ.13 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ಸಮರ್ಪಕ ಸಿದ್ಧತೆಗೆ ಸಭಾಧ್ಯಕ್ಷ ಕಾಗೇರಿ ಸೂಚನೆ

posted in: ರಾಜ್ಯ | 0

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಇದೇ ಡಿ.13 ರಿಂದ 24ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಯಶಸ್ವಿಗೊಳಿಸಲು ಉತ್ತಮ ವಸತಿ, ಸಾರಿಗೆ ,ಆಹಾರ , ಶಿಷ್ಟಾಚಾರ ಸಿದ್ಧತೆಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಸಮರ್ಪಕವಾಗಿ ಕೈಗೊಳ್ಳಬೇಕು.ಸದ್ಯಕ್ಕೆ ಕೊರೊನಾ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅಧಿವೇಶನದ … Continued

ಪರಿಷತ್‌ ಸದಸ್ಯರಿಗೆ ಅವಧಿ ಮೀರಿದ ಮಾಸ್ಕ್ ವಿತರಣೆ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಭಾಪತಿ ಹೊರಟ್ಟಿ ಸೂಚನೆ

posted in: ರಾಜ್ಯ | 0

ಬೆಂಗಳೂರು: ಅವಧಿ ಮೀರಿದ ಮಾಸ್ಕ್ ವಿತರಿಸಿದ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜಹೊರಟ್ಟಿ ಸರ್ಕಾರಕ್ಕೆ ವಿಧಾನಪರಿಷತ್‌ನಲ್ಲಿ ಇಮದು (ಶುಕ್ರವಾರ) ಸೂಚಿಸಿದ್ದಾರೆ. ಒಂದು ವರ್ಷದ ಅವಧಿ ಮೀರಿದ ಮಾಸ್ಕ್‌ಗೆ ಎರಡು ವರ್ಷದ ಸ್ಟಿಕರ್ ಅಂಟಿಸಿ ನೀಡಿರುವ ಸಂಬಂಧ ಆರೋಗ್ಯ ಇಲಾಖೆಯ ಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು. ಹಾಗೂ … Continued

ಆ.13 ರಂದು ವಿಧಾನ ಪರಿಷತ್ತಿನ ಐವರು ಸದಸ್ಯರ ಸಮಿತಿ ಸಭೆ

posted in: ರಾಜ್ಯ | 0

ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆಗೊಂಡಿರುವ ಅನುದಾನ ಬಿಡುಗಡೆ ಕುರಿತು ವಿಧಾನ ಪರಿಷತ್ತಿನ ಐದು ಜನ ಸದಸ್ಯರ ಸಮಿತಿ ಸಭೆ ಸಭಾಪತಿ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ಆ.13 ರಂದು (ಶುಕ್ರವಾರ) ನಡೆಯಲಿದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರ ಸಭೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ … Continued

ಅನುದಾನ ಬಿಡುಗಡೆ: ಪಕ್ಷಭೇದ ಮರೆತು ಮರೆತು ವಿಧಾನ ಪರಿಷತ್ ಸದಸ್ಯರು ರಾಜ್ಯ ಸರ್ಕಾರದ ಮೇಲೆ ಗರಂ

posted in: ರಾಜ್ಯ | 0

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಸದಸ್ಯರು ಪಕ್ಷಭೇದ ಮರೆತು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರೂ ಸರ್ಕಾರದ ಮೇಲೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಏಕವ್ಯಕ್ತಿ ಸಂಪುಟದ ಸರ್ಕಾರ ರಾಜ್ಯದಲ್ಲಿದೆ. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು … Continued

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಉತ್ತಮ:ಶಿಕ್ಷಣ ಸಚಿವರಿಗೆ ಸಭಾಪತಿ ಹೊರಟ್ಟಿ ಸಲಹೆ

posted in: ರಾಜ್ಯ | 0

ಬೆಂಗಳೂರು: ಮಕ್ಕಳಿಗೆ ಓದದಿದ್ದರೂ ಉತ್ತೀರ್ಣರಾಗಬಹುದು ಎಂಬ ಮನೋಭಾವನೆ ಬರಬಹುದು. ಹೀಗಾಗಿ ಈಗಾಗಲೇ ಆನ್‍ಲೈನ್, ಆಫ್‍ಲೈನ್ ಮೂಲಕ ಪಾಠಪ್ರವಚನವನ್ನು ಮಾಡಿ ತರಗತಿಗಳನ್ನು ನಡೆಸಿದ್ದು, ಪರೀಕ್ಷೆ ಮಾಡುವುದರಲ್ಲಿ ಏನು ತಪ್ಪಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಅವರಿಗೆ ಸಭಾಪತಿ ಬಸವರಾಜ್ … Continued

ಕೆಟ್ಟುಹೋದ ವಿಧಾನ ಪರಿಷತ್ ಸಿಸಿಟಿವಿಗಳು: ಹೊರಟ್ಟಿ ಎಚ್ಚರಿಕೆ

posted in: ರಾಜ್ಯ | 0

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಬಹುತೇಕ ಸಿಸಿಟಿವಿಗಳು ಕಾರ್ಯ ನಿರ್ವಹಿಸದಿರುವುದಕ್ಕೆ ಅಸಮಾಧಾನಗೊಂಡಿರುವ ಸಭಾಪತಿ ಬಸವರಾಜ ಹೊರಟ್ಟಿ ಈ ಕುರಿತು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ವಿಧಾನಪರಿಷತ್ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದಿರುವ ಅವರು, ಸಚಿವಾಲಯದಲ್ಲಿ ಅಳವಡಿಸಲಾಗಿರುವ ಹಲವು ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳನ್ನು ಉದ್ದೇಶಪೂರ್ವಕವಾಗಿ ಕೆಲವರು ಹಾಳು ಮಾಡುತ್ತಿರುವ ದೂರುಗಳು ಬರುತ್ತಿವೆ. ಅಂಥವರ … Continued