ಕಾಂಗ್ರೆಸ್​ಗೆ ಸದ್ಯಕ್ಕೆ ರಾಜೀನಾಮೆ ನೀಡುವುದಿಲ್ಲ: ಸಿಎಂ ಇಬ್ರಾಹಿಂ ಯು ಟರ್ನ್

ಹುಬ್ಬಳ್ಳಿ: ಫೇಬ್ರವರಿ 14ರಂದು ವಿಧಾನ ಪರಿಷತ್‌ಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ತೊರೆಯುವುದಾಗಿ ಹೇಳಿದ್ದ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಈಗ ತಮ್ಮ ವರಸೆ ಬದಲಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಿಧಾನಪರಿಷತ್ ಸ್ಥಾನಕ್ಕೆ ನಾಳೆ, ಸೋಮವಾರ ರಾಜೀನಾಮೆ ನೀಡುವುದಿಲ್ಲ. ಬಜೆಟ್‌ ಅಧಿವೇಶನದ ಬಳಿಕ ಈ ಬಗ್ಗೆ ತೀರ್ನಾನಿಸುತ್ತೇನೆ. ಅಧಿವೇಶನದ ಸಮಯದಲ್ಲಿ ಮತಾಂತರ ನಿಷೇಧ ಕಾಯ್ದೆ ಪರಿಷತ್‌ನಲ್ಲಿ ಮಂಡನೆ ಆಗುವ ಸಾಧ್ಯತೆ ಇದೆ, ಈಗ ರಾಜೀನಾಮೆ ನೀಡಿದರೆ ಬಿಜೆಪಿಗೆ ಲಾಭವಾಗಲಿದೆ. ಹೀಗಾಗಿ ನಂತರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಈಗ ಕಾಂಗ್ರೆಸ್ ಹೈಕಮಾಂಡ್​ನಿಂದ ನನಗೆ ಬುಲಾವ್ ಬಂದಿದೆ ಎಂದು ಜಮೀರ್‌ ಅಹಮ್ಮದ್‌ ಹೇಳುತ್ತಿದ್ದಾರೆ. ಅವರು ಕರೆದರೆ ಹೋಗುತ್ತೇನೆ, ಅವರು ಏನು ಹೇಳುತ್ತಾರೋ ನೋಡಿಕೊಂಡು ನಂತರ ಸಭೆ ನಡೆಸಿ ಕಾಂಗ್ರೆಸ್‌ಗೆ ರಾಜೀನಾಮೆ ತೀರ್ಮಾನ ಕೈಗೊಳ್ಳುತ್ತೇನೆ. ಸದ್ಯಕ್ಕೆ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement