ಗೋವಾ, ಉತ್ತರಾಖಂಡದಲ್ಲಿ ಕಳೆದ ಚುನಾವಣೆಗಿಂತ ಕಡಿಮೆ ಮತದಾನ..!

ನವದೆಹಲಿ: ಗೋವಾ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮತದಾನ ಸೋಮವಾರ ಶಾಂತಿಯುತವಾಗಿ ನಡೆಯಿತು. ಗೋವಾದಲ್ಲಿ ಶೇ.78.94ರಷ್ಟು ಅತಿ ಹೆಚ್ಚು ಮತದಾನವಾಗಿದೆ. ಉತ್ತರಾಖಂಡದಲ್ಲಿ ಶೇ.59.51ರಷ್ಟು ಮತದಾನವಾಗಿದೆ ಹಾಗೂ ಉತ್ತರ ಪ್ರದೇಶದಲ್ಲಿ ನ ಶೇ.61.20ರಷ್ಟು ಮತದಾನವಾಗಿದೆ.
ಮತದಾನ ನಡೆದಿದೆ. ಗೋವಾದ 40 ಹಾಗೂ ಉತ್ತರಾಖಂಡದ 70 ಸ್ಥಾನಗಳು ಹಾಗೂ ಉತ್ತರ ಪ್ರದೇಶದಲ್ಲಿ 2ನೇ ಹಂತದಲ್ಲಿ 55 ಕ್ಷೇತ್ರಗಳು ಸೇರಿ 165 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಉತ್ತರ ಪ್ರದೇಶದಲ್ಲಿ ಮೊದಲ ಹಂತ (ಶೇ.60) ಹಾಗೂ ಎರಡನೇ ಹಂತದ ಮತದಾನ ಹಾಗೂ ಉತ್ತರಾಖಂಡದಲ್ಲಿ ಸೋಮವಾರ ದಾಖಲಾದ ಮತದಾನ ಪ್ರಮಾಣ ಗಮನಿಸಿದರೆ, ಗೋವಾದಲ್ಲಿ ಹೆಚ್ಚಿನ ಜನ ಮತದಾನ ಮಾಡಿದ್ದಾರೆ. ಶೇ.78.94ರಷ್ಟು ಮತದಾನವಾಗಿದೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಇಳಿಕೆಯಾಗಿದೆ. 2017ರಲ್ಲಿ ಗೋವಾದಲ್ಲಿ ಶೇ.82.56ರಷ್ಟು ಮತದಾನವಾಗಿತ್ತು. ಉತ್ತರಾಖಂಡದಲ್ಲಿಯೂ ಹೀಗೆಯೇ ಆಗಿದೆ. ಉತ್ತರಾಖಂಡದಲ್ಲಿ ಶೇ.59.51ರಷ್ಟು ಮತದಾನವಾಗಿದೆ. ಆದರೆ ಕಳೆದ ಚುನಾವಣೆಯಲ್ಲಿ ಶೇ.65.68ರಷ್ಟು ಮತದಾನವಾಗಿತ್ತು.
ಮತದಾನ ಕೇಂದ್ರಗಳ ಸುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕೆಲವು ಕಡೆ ಮಾತ್ರ ಮತಯಂತ್ರಗಳಲ್ಲಿ ಸಣ್ಣ ಪುಟ್ಟ ತಾಂತ್ರಿಕ ದೋಷಗಳು ಕಂಡು ಬಂದಿದ್ದು, ಬಳಿಕ ಅವುಗಳನ್ನು ಸರಿಪಡಿಸಿ ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ಪ್ರಮುಖ ಸುದ್ದಿ :-   ವೀಡಿಯೊ ; ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ; ಕಾಶ್ಮೀರದ ಹಲವೆಡೆ ಡ್ರೋಣ್‌ ದಾಳಿ ; ತಿರುಗೇಟು ನೀಡಲು ಸೇನೆಗೆ ಮುಕ್ತ ಅಧಿಕಾರ ನೀಡಿದ ಭಾರತ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement