ಉಗ್ರಪ್ಪ ವಿರುದ್ಧ 1 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಿ.ಎಂ.ಇಬ್ರಾಹಿಂ

ಬೆಂಗಳೂರು: ವಕ್ಫ್ ಆಸ್ತಿ ಕಬಳಿಸಿದ್ದಾರೆ ಎಂಬ ಆರೋಪ ಸೇರಿದಂತೆ ತಮ್ಮ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಿರುದ್ಧ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಉಗ್ರಪ್ಪ ವಿರುದ್ಧ ಬಾರ್ ಕೌನ್ಸಿಲ್‌ಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ನಾನು ಸಿಬಿಐ ತನಿಖೆ ಎದುರಿಸಿ, ಯಾವುದೇ ತಪ್ಪಿಲ್ಲ ಎಂದು ಸಿಬಿಐ ರಿಪೋರ್ಟ್ ಕೊಟ್ಟಿದೆ. ಉಗ್ರಪ್ಪ ಈ ಬಗ್ಗೆ ಉತ್ತರ ಕೊಡಬೇಕು. ನಂತರ ನಾನು ಬಹಿರಂಗ ಚರ್ಚೆಗೆ ಗೆ ಬರುತ್ತೇನೆ. ಉಗ್ರಪ್ಪ ನನ್ನ ವಕೀಲರಾಗಿದ್ದರು. ಇದೀಗ ನನ್ನ‌ ಮೇಲೆ ಕೋಟ್ಯಾಂತರ ರೂಪಾಯಿ ಹಗರಣದ ಆರೋಪ‌ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.
ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಜೊತೆಗೆ ಬಾರ್ ಕೌನ್ಸಿಲ್‌ಗೆ ಮನವಿ ಮಾಡುತ್ತೇನೆ. ನನ್ನ ವಕೀಲರಾಗಿ ಕಕ್ಷಿದಾರನ ಜೊತೆ ಸರಿಯಾಗಿ ನಡೆದುಕೊಂಡಿಲ್ಲ. ಇಂತಹವರು ಲಾಯರ್ ಆಗಲು ಸಾಧ್ಯವೇ? ಈ ಕಾರಣಕ್ಕಾಗಿ ವಕೀಲಿಕೆ ಮಾಡಲು ಅವಕಾಶ ಕೊಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.
ಉಗ್ರಪ್ಪ ಅವರು ಎಷ್ಟು ಚುನಾವಣೆ ಗೆದ್ದಿದ್ದಾರೆ ಎಂದು ಪ್ರಶ್ನಿಸಿದ ಅವರು ಒಂದು ಉಪಚುನಾವಣೆಯನ್ನು ‘ವಿಧವೆ ಮದುವೆ ಮಾಡಿದಂತೆ ಮಾಡಿದೆವು’. ಅದು ಒಂದು ವರ್ಷದಲ್ಲಿ ಸತ್ತು ಹೋಯಿತು ಎಂದು ವ್ಯಂಗ್ಯವಾಡಿದರು. ನಾನು ಕ್ಷೇತ್ರ ರಾಜಕಾರಣ ಮಾಡಿಲ್ಲ. ರಾಜ್ಯ, ರಾಷ್ಟ್ರ ರಾಜಕಾರಣ ಮಾಡಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement