ಮಾಸ್ಕೋ: ಸಂಭಾವ್ಯ ಆಕ್ರಮಣದ ಭೀತಿಯ ನಂತರ ತನ್ನ ಕೆಲವು ಪಡೆಗಳು ಉಕ್ರೇನಿಯನ್ ಗಡಿಯಿಂದ ಹಿಂದೆ ಸರಿಯಲು ಪ್ರಾರಂಭಿಸಿವೆ ಎಂದು ರಷ್ಯಾ ಮಂಗಳವಾರ ದೃಢಪಡಿಸಿದೆ.
ಅಧಿಕೃತ ಹೇಳಿಕೆಯಲ್ಲಿ, ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರು, ದಕ್ಷಿಣ ಮತ್ತು ಪಶ್ಚಿಮ ಮಿಲಿಟರಿ ಜಿಲ್ಲೆಗಳ ಘಟಕಗಳು, ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ, ಈಗಾಗಲೇ ರೈಲು ಮತ್ತು ರಸ್ತೆ ಸಾರಿಗೆಯಲ್ಲಿಇಂದು ಅವರು ತಮ್ಮ ಮಿಲಿಟರಿ ಗ್ಯಾರಿಸನ್ಗಳಿಗೆ ತೆರಳಲು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ.
ಉಕ್ರೇನ್ ಪರಿಸ್ಥಿತಿಯನ್ನು ಚರ್ಚಿಸಲು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ನಿಗದಿತ ಸಭೆಗೆ ಮುಂಚಿತವಾಗಿ ಪಡೆಗಳು ಮರಳಿ ನೆಲೆಗಳಿಗೆ ತಲುಪುವ ಘೋಷಣೆ ಬಂದಿದೆ.
ಹಿಂದಿನ ಸೋವಿಯತ್ ದೇಶವಾದ ಉಕ್ರೇನ್ನ ಸುತ್ತಲೂ ರಷ್ಯಾ 1,00,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು, ಇದರ ನಂತರ ಮಾಸ್ಕೋ ತನ್ನ ಆಕ್ರಮಣ ಯೋಜನೆಗಳೊಂದಿಗೆ ಮುಂದುವರಿದರೆ ಆರ್ಥಿಕ ದಂಡನೆ ಕ್ರಮಗಳನ್ನು ವ್ಯಾಪಕವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ಯುರೋಪಿಯನ್ ದೇಶಗಳು ಮತ್ತು ಅಮೆರಿಕ ಎಂದು ಎಚ್ಚರಿಕೆ ನೀಡಿತ್ತು.
ಅಮೆರಿಕ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ಗಡಿಯ ಬಳಿ ಪಡೆಗಳ ನಿರಂತರ ಕ್ರೋಡೀಕರಣದ ಬಗ್ಗೆ ರಷ್ಯಾವನ್ನು ತೀವ್ರವಾಗಿ ಟೀಕಿಸಿವೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಭಯದ ಹಿನ್ನೆಲೆಯಲ್ಲಿ ತನ್ನ ಮಿತ್ರರಾಷ್ಟ್ರಗಳನ್ನು ಬೆಂಬಲಿಸಲು ಅಮೆರಿಕ ಈಗಾಗಲೇ ಹೆಚ್ಚುವರಿ ಪಡೆಗಳನ್ನು ಯುರೋಪಿಗೆ ಕಳುಹಿಸಿದೆ.
ಉಕ್ರೇನ್ ಬಳಿ ಮತ್ತು ಬೆಲಾರಸ್ ಸೇರಿದಂತೆ ರಷ್ಯಾದ ಮಿಲಿಟರಿ ಡ್ರಿಲ್ಗಳಿಂದ ಉದ್ವಿಗ್ನತೆ ಉಲ್ಬಣಗೊಂಡಿದೆ, ಅಲ್ಲಿ ಫೆಬ್ರವರಿ 20 ರ ವರೆಗೆ ನಡೆಸಲು ನಿಗದಿಪಡಿಸಲಾದ ಮಿಲಟರಿ ಅಭ್ಯಾಸಗಳಲ್ಲಿ ಸುಮಾರು 30,000 ಸೈನಿಕರು ಭಾಗವಹಿಸುತ್ತಿದ್ದಾರೆ ಎಂದು ಅಮೆರಿಕ ಹೇಳಿತ್ತು.
ಹಿಂದಿನ ಸೋಮವಾರ, ಉಕ್ರೇನ್ನ ರಕ್ಷಣಾ ಸಚಿವರು ತಮ್ಮ ಬೆಲರೂಸಿನ ತಮ್ಮ ಸಹವರ್ತಿಯೊಂದಿಗೆ ಮಾತನಾಡಿದ್ದಾರೆ ಮತ್ತು ಬೆಲರೂಸಿಯನ್ ಪ್ರದೇಶದಿಂದ ಕೈವ್ಗೆ ಯಾವುದೇ ಬೆದರಿಕೆ ಇಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ