ತಿರುಪತಿ: ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ದೇಣಿಗೆಯಾಗಿ, ಫೆಬ್ರವರಿ 17 ರಂದು ಚೆನ್ನೈನ ಕುಟುಂಬವೊಂದು ₹3.20 ಕೋಟಿ ನಗದು ಮತ್ತು ₹ 6 ಕೋಟಿ ಮೌಲ್ಯದ ಆಸ್ತಿಯನ್ನು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ದಾನ ಮಾಡಿದೆ.
ಮೃತ ಸಹೋದರಿ ಪರ್ವತಮ್ಮ ಅವರ ಹೆಸರಿನಲ್ಲಿರುವ ಎರಡು ವಸತಿ ಗೃಹಗಳ ಹಕ್ಕು ಪತ್ರವನ್ನು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರಿಗೆ ಹಸ್ತಾಂತರಿಸಿದ ರೇವತಿ ವಿಶ್ವನಾಥನ್ ಅವರು ತಿರುಪತಿಯಲ್ಲಿ ಪೀಡಿಯಾಟ್ರಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 3.20 ಕೋಟಿ ರೂ.ಗಳನ್ನು ವಿನಿಯೋಗಿಸುವಂತೆ ಒತ್ತಾಯಿಸಿದರು.
ಆಕೆಯ ಸಹೋದರಿ ತನ್ನ ಜೀವನದುದ್ದಕ್ಕೂ ಅವಿವಾಹಿತೆ ಆಗಿ ಉಳಿದಿದ್ದಾರೆ ಮತ್ತು ಅವರ ಸಾವಿನ ನಂತರ ತನ್ನ ಆಸ್ತಿ ಮತ್ತು ಬ್ಯಾಂಕ್‌ನಲ್ಲಿರುವ ಹಣವನ್ನು ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ದಾನ ಮಾಡಬೇಕೆಂದು ಬಯಸಿದ್ದರು. ವೆಂಕಟೇಶ್ವರ ದೇವರ ಕಟ್ಟಾ ಭಕ್ತೆಯಾಗಿರುವ ಆಕೆಯ ಸಹೋದರಿ ಈ ಹಿಂದೆಯೂ ಟಿಟಿಡಿ ನಡೆಸುತ್ತಿರುವ ವಿವಿಧ ಟ್ರಸ್ಟ್‌ಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಮತ್ತು ಪ್ರಸ್ತುತ (ದೇಣಿಗೆ) ವಿಧಿವಿಧಾನಗಳನ್ನು ಅವರ ಇಚ್ಛಾ ಪತ್ರಕ್ಕೆ ಅನುಗುಣವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ಪಿ.ವಿ.ವಿಶ್ವನಾಥನ್ ಮತ್ತು ವಿ.ಕೃಷ್ಣನ್ (ವಿಲ್ ಎಕ್ಸಿಕ್ಯೂಟರ್) ಸಹ ಉಪಸ್ಥಿತರಿದ್ದರು.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ