ಇನ್ಮುಂದೆ ಕೇರಳ, ಗೋವಾದಿಂದ ಬರುವವರಿಗೆ ಆರ್ ಟಿ-ಪಿಸಿಆರ್ ವರದಿ ಬೇಕಾಗಿಲ್ಲ

ಬೆಂಗಳೂರು: ನೆರೆಯ ರಾಜ್ಯಗಳಾದ ಕೇರಳ ಮತ್ತು ಗೋವಾದ ಪ್ರಯಾಣಿಕರಿಗೆ ಋಣಾತ್ಮಕ ಆರ್‌ಟಿ-ಪಿಸಿಆರ್‌ (RT-PCR) ಕೋವಿಡ್‌-19 ಪರೀಕ್ಷಾ ಫಲಿತಾಂಶವನ್ನು ಕಡ್ಡಾಯಗೊಳಿಸಿದ್ದ ಕರ್ನಾಟಕ ಸರ್ಕಾರವು ನಿಯಮವನ್ನು ಹಿಂತೆಗೆದುಕೊಂಡಿದೆ ಮತ್ತು ಅಂತಹ ಪ್ರಯಾಣಿಕರು ಇನ್ನು ಮುಂದೆ ಋಣಾತ್ಮಕ ಆರ್‌ಟಿ-ಪಿಸಿಆರ್‌ ವರದಿ ಅಗತ್ಯವಿಲ್ಲ ಎಂದು  ಸರ್ಕಾರ ಫೆಬ್ರವರಿ 17 ರ ಗುರುವಾರ ಪ್ರಕಟಿಸಿದೆ.

ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ ಟಿಕೆ ಅನಿಲ್ ಕುಮಾರ್ ಅವರು ಸುತ್ತೋಲೆಯಲ್ಲಿ, “ಪ್ರಸ್ತುತ ಕೋವಿಡ್‌-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಗೋವಾ ಕೇರಳ (ವಾಯುಮಾರ್ಗ, ರೈಲ್ವೆ, ರಸ್ತೆ ಸಾರಿಗೆ ಮತ್ತು ವೈಯಕ್ತಿಕ ವಾಹನ) ರಾಜ್ಯಗಳಿಂದ ಆಗಮಿಸುವವರಿಗೆ ಆರ್‌ಟಿ-ಪಿಸಿಆರ್ ನಕಾರಾತ್ಮಕ ಪರೀಕ್ಷಾ ವರದಿಯನ್ನು ಹೊಂದುವ ಆದೇಶವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಆದಾಗ್ಯೂ, ಈ ಎರಡು ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಅಧಿಕಾರಿಗಳಿಗೆ ಒದಗಿಸಬೇಕು ಮತ್ತು ಅವರು ಕೋವಿಡ್‌-19 ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ

ಕೇರಳ ಮತ್ತು ಗೋವಾದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯೊಂದಿಗೆ ಈ ಎರಡು ರಾಜ್ಯಗಳಿಂದ ಬರುವ ಜನರಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ತೋರಿಸುವುದನ್ನು ನಿಲ್ಲಿಸಬೇಕೆಂದು ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಈ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವಿಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement