ಕರ್ನಾಟಕದಲ್ಲಿ ಮತ್ತಷ್ಟು ಇಳಿದ ದೈನಂದಿನ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಇಂದು, ಶುಕ್ರವಾರ ಹೊಸದಾಗಿ 1,333 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇವೇಳೆ ರಾಜ್ಯದಲ್ಲಿ ಒಟ್ಟು 19 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಯಲ್ಲಿ 4,890 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 16,184ಕ್ಕೆ ಇಳಿಕೆಯಾಗಿದ್ದು, ಸಕಾರಾತ್ಮಕತೆ ದರ ಪ್ರಮಾಣ 1.59%ಕ್ಕೆ ಇಳಿದಿದೆ. ರಾಜ್ಯದಲ್ಲಿ ಇದುವರೆಗೆ 39,757 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೊವಿಡ್ 705 ಪ್ರಕರಣ ದಾಖಲಾಗಿದ್ದು, 9 ಜನರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 10, ಬಳ್ಳಾರಿ 41, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 705, ಬೀದರ್ 9, ಚಾಮರಾಜನಗರ 17, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 14, ಚಿತ್ರದುರ್ಗ 29, ದಕ್ಷಿಣ ಕನ್ನಡ 37, ದಾವಣಗೆರೆ 7, ಧಾರವಾಡ 33, ಗದಗ 6, ಹಾಸನ 22, ಹಾವೇರಿ 22, ಕಲಬುರಗಿ 28, ಕೊಡಗು 28, ಕೋಲಾರ 16, ಕೊಪ್ಪಳ 3, ಮಂಡ್ಯ 21, ಮೈಸೂರು 61, ರಾಯಚೂರು 3, ರಾಮನಗರ 13, ಶಿವಮೊಗ್ಗ 25, ತುಮಕೂರು 55, ಉಡುಪಿ 34, ಉತ್ತರ ಕನ್ನಡ 21, ವಿಜಯಪುರ 5 ಹಾಗೂ ಯಾದಗಿರಿಯಲ್ಲಿ 2 ಹೊಸದಾಗಿ ಪ್ರಕರಣ ಪತ್ತೆಯಾಗಿದೆ

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement