ಮುಂಬೈ: ಕುಡಿದು ವಾಹನ ಚಲಾಯಿಸಿ, ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟಿ ಕಾವ್ಯಾ ಥಾಪರ್ ಬಂಧನ

ಮುಂಬೈ: ನಟಿ ಕಾವ್ಯಾ ಥಾಪರ್ ಅವರನ್ನು ಗುರುವಾರ ಬೆಳ್ಳಂಬೆಳಗ್ಗೆ ಜುಹು ಪೊಲೀಸರು ಬಂಧಿಸಿದ್ದಾರೆ.
ಕುಡಿದು ವಾಹನ ಚಲಾಯಿಸಿ ವಿಲೆ ಪಾರ್ಲೆ (ಪಶ್ಚಿಮ) ದ ಜುಹುವಿನಲ್ಲಿರುವ ನಿರ್ಭಯಾ ಸ್ಕ್ವಾಡ್‌ನ ಮಹಿಳಾ ಪೇದೆಯೊಬ್ಬರ ಜೊತೆ ಅಮಾನುಷವಾಗಿ ವರ್ತಿಸಿದ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ಬಳಿ ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಟಿ ಅಲ್ಲಿಗೆ ಪಾರ್ಟಿಗಾಗಿ ಬಂದಿದ್ದರು ಮತ್ತು ತನ್ನ ಕಾರಿನಲ್ಲಿ ತನ್ನ ಸ್ನೇಹಿತನೊಂದಿಗೆ ಪೂರ್ವ ಉಪನಗರದಲ್ಲಿರುವ ತನ್ನ ನಿವಾಸಕ್ಕೆ ಹಿಂತಿರುಗುತ್ತಿದ್ದರು.
ಥಾಪರ್ ಮದ್ಯದ ಅಮಲಿನಲ್ಲಿದ್ದ ಕಾರಣ ಆಕೆ ತನ್ನ ಕಾರನ್ನು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಲಭಿಸಿದ್ದು, ಜುಹು ಪೊಲೀಸ್ ಠಾಣೆಯಿಂದ ನಿರ್ಭಯಾ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿದೆ. ನಟಿ ಕಾವ್ಯ ಥಾಪರ್ ಮಹಿಳಾ ಪೇದೆಯೊಬ್ಬಳ ಕಾಲರ್ ಹಿಡಿದು ನಿಂದಿಸಿದ್ದಾರೆ. ಮಹಿಳಾ ಪೇದೆ ನೆಲದ ಮೇಲೆ ಬಿದ್ದಿದ್ದಾರೆ.
ನಟಿಯ ಮೇಲೆ ಐಪಿಸಿ ಮತ್ತು ಮೋಟಾರು ವಾಹನಗಳ ಕಾಯ್ದೆಯ ಸೂಕ್ತ ಸೆಕ್ಷನ್‌ಗಳಡಿಯಲ್ಲಿ ದುಡುಕಿನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತು ಸಾರ್ವಜನಿಕ ಸೇವಕನ ಮೇಲೆ ಕ್ರಿಮಿನಲ್ ಬಲದಿಂದ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಲಾಗಿದೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ನಟಿಯನ್ನು ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಗಿದ್ದು, ಜಾಮೀನು ಸಿಗುವವರೆಗೂ ಅಲ್ಲಿಯೇ ಇರಬೇಕಾಗುತ್ತದೆ

ಓದಿರಿ :-   ಎನ್‌ಐಎ ಅಧಿಕಾರಿ-ಪತ್ನಿ ಹತ್ಯೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ