ಹಿರಿಯ ಸಿಖ್ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ: ಭಾನುವಾರ ಪಂಜಾಬ್ ಚುನಾವಣೆಗೆ ಮುನ್ನ ದೆಹಲಿಯ ತಮ್ಮ ಮನೆಯಲ್ಲಿ ಹಿರಿಯ ಸಿಖ್ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಾವೆಷ್ಟು ದಬ್ಬಾಳಿಕೆ ಅನುಭವಿಸಿದ್ದೆವು. ನಾನು ಆಗ ಭೂಗತನಾಗಿದ್ದೆ. ಮರೆಮಾಚಲು ಸಿಖ್ ವೇಷ ಧರಿಸುತ್ತಿದ್ದೆ. ಪಗ್ಡಿ ಧರಿಸುತ್ತಿದ್ದೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಸಿಖ್ ಸಮುದಾಯ ಜತೆ ಮಾತನಾಡಿದ ಪ್ರಧಾನಿ ಮೋದಿ, 1947 ರ ವಿಭಜನೆಯ ಸಮಯದಲ್ಲಿ ಸಿಖ್ ಪುಣ್ಯಕ್ಷೇತ್ರ ಕರ್ತಾರ್‌ಪುರ ಸಾಹಿಬ್ ಭಾರತದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದರು. ಕರ್ತಾರ್‌ಪುರ ಸಾಹಿಬ್ ಪಾಕಿಸ್ತಾನದಲ್ಲಿದೆ ಮತ್ತು ಪಂಜಾಬ್‌ನಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. “ಆರು ಕಿಮೀ ದೂರದಲ್ಲಿರುವ ಕರ್ತಾರ್‌ಪುರವನ್ನು ತರಲು ಅವರು ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ನಾನು ರಾಜತಾಂತ್ರಿಕ ದಾರಿ ಮೂಲಕ ಮಾತುಕತೆ ಪ್ರಾರಂಭಿಸಿದೆ. ನಾನು ಪಂಜಾಬ್‌ನಲ್ಲಿದ್ದಾಗ ನಾನು (ಕರ್ತಾರ್‌ಪುರ ಸಾಹಿಬ್) ದುರ್ಬೀನು ಬಳಸಿ ನೋಡುತ್ತಿದ್ದೆ. ಆಗ ನಾನು ಏನಾದರೂ ಮಾಡಬೇಕು ಯೋಚಿಸುತ್ತಿದ್ದೆ ಎಂದು ಪ್ರಧಾನಿ ಮೋದಿ ಹೇಳಿದರು. “
ಇದೊಂದು ಪವಿತ್ರ ಕಾರ್ಯವಾಗಿದ್ದು, ಗುರುಗಳ ಆಶೀರ್ವಾದದಿಂದ ನಾವು ಇದನ್ನು ಮಾಡಿದ್ದೇವೆ. ನಾವು ಇಷ್ಟು ಕಡಿಮೆ ಸಮಯದಲ್ಲಿ ಏನು ಮಾಡಿದ್ದೇವೆ, ಭಕ್ತಿ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಅವರು ಹೇಳಿದರು. ಅಲ್ಲದೆ, ಅವರು ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ ಅನ್ನು ಮರಳಿ ತರುವ ಬಗ್ಗೆಯೂ ಮಾತನಾಡಿದರು.

ಇಂದಿನ ಪ್ರಮುಖ ಸುದ್ದಿ :-   ಅಧಿಕೃತವಾಗಿ ಒಡಿಶಾ ರೈಲು ಅಪಘಾತದ ತನಿಖೆ ವಹಿಸಿಕೊಂಡ ಸಿಬಿಐ : ವಿಧ್ವಂಸಕ ಕೃತ್ಯದ ಸುಳಿವು ನೀಡಿದ ರೈಲ್ವೆ

ಗುರು ಗ್ರಂಥ ಸಾಹಿಬ್ ಅನ್ನು ಅಫ್ಘಾನಿಸ್ತಾನದಿಂದ ಹೆಮ್ಮೆಯಿಂದ ಮರಳಿ ತರಬೇಕು. ನಾವು ವಿಶೇಷ ವಿಮಾನವನ್ನು ಒದಗಿಸಿದ್ದೇವೆ. ಅದನ್ನು ಗೌರವದಿಂದ ಹಿಂತಿರುಗಿಸಲು ನಾನು ನಮ್ಮ ಮಂತ್ರಿಗಳನ್ನು ಕೇಳಿದ್ದೇನೆ. ಇದು ನಮ್ಮ ಜೀವನದಲ್ಲಿ ಅಮೂಲ್ಯವಾದದ್ದು. ಗುರು ಗೋಬಿಂದ್ ಸಿಂಗ್ ಗುಜರಾತ್‌ನವರಾಗಿರುವುದರಿಂದ ನಾನು ನಿಮ್ಮೊಂದಿಗೆ ರಕ್ತ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಹೇಳಿದರು.
ಊಟದ ಸಮಯದಲ್ಲಿ, ಪ್ರಧಾನ ಮಂತ್ರಿ ಸಿಖ್ ನಾಯಕರಿಗೆ ತಟ್ಟೆಗಳನ್ನು ನೀಡಿ”ನಾನು ಇಂದು ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸಿಖ್‌ ನಾಯಕರಿಂದ ಸಿರೋಪಾ ಅಥವಾ ಗೌರವಾನ್ವಿತ ನಿಲುವಂಗಿಯನ್ನು ಸ್ವೀಕರಿಸುತ್ತಿದ್ದಂತೆ, ಪ್ರಧಾನಿ ಮೋದಿ ಅವರು ಸಿಖ್ ಗುರುಗಳಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ಅವರ ಬೋಧನೆಗಳನ್ನು ಅನುಸರಿಸಲು ಪ್ರಯತ್ನಿಸಿರುವುದಾಗಿ ಎಂದು ಹೇಳಿದರು.

ನಾಯಕರು ಪ್ರಧಾನಿಯವರಿಗೆ ಕೇಸರಿ ಪಟ್ಕಾ ಅಥವಾ ಸ್ಕಾರ್ಫ್‌ಗಳನ್ನು ಸುತ್ತುವ ಮೂಲಕ ಸ್ವಾಗತಿಸಿದರು. ಪ್ರಧಾನಿಯವರು ತಮ್ಮ ಸಿಬ್ಬಂದಿಗೆ ಬಟ್ಟೆ ನೆಲಕ್ಕೆ ತಾಗದಂತೆ ಹೇಳುತ್ತಿರುವುದು ಕಂಡುಬಂತು.
ಸಿಖ್ ನಾಯಕರೊಬ್ಬರು ಪ್ರಧಾನಿ ಮೋದಿಯವರಿಗೆ, ಪ್ರತಿಯೊಬ್ಬರ ಹೃದಯವನ್ನು ತಲುಪಲು ಪ್ರಯತ್ನಿಸುವ “ಮೊದಲ ಪ್ರಧಾನಿ” ಎಂದು ಹೇಳಿದರು. “ಮೋದಿ-ಜಿಯವರ ಹೃದಯ ಸಿಖ್ಖರ ಹೃದಯ” ಎಂದು ಅವರು ಹೇಳಿದರು.

ಇಂದಿನ ಪ್ರಮುಖ ಸುದ್ದಿ :-   ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಮುನ್ಸೂಚನೆ, ಮುಂಗಾರು ಮತ್ತಷ್ಟು ವಿಳಂಬವಾಗುವ ಸಾಧ್ಯತೆ...

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement