ಹುಬ್ಬಳ್ಳಿ: ಎರಡು ವರ್ಷದ ಮಗು ಸಾವು, ಕಿಮ್ಸ್ ಎದುರು ಸಂಬಂಧಿಕರ ಪ್ರತಿಭಟನೆ

posted in: ರಾಜ್ಯ | 0

ಹುಬ್ಬಳ್ಳಿ: ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಯದ ಕಾರಣದಿಂದ ಎರಡು ವರ್ಷದ ಮಗು ಮೃತಪಟ್ಟಿದೆ ಎಂದು‌ ಆರೋಪಿಸಿ ಪಾಲಕರು ಹಾಗೂ ಕುಟುಂಬದವರು ಶುಕ್ರವಾರ ಕಿಮ್ಸ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ರಕ್ತನಾಳ ಗಂಟು ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಅದು ವಿಫಲವಾಗಿ ಮಗು ಮೃತ ಪಟ್ಟಿದೆ ಎಂಬುದು ಪಾಲಕರ ಆರೋಪ.
ಜನಿಸಿದಾಗಿನಿಂತ ಮಗುವಿಗೆ ಬಾಯಲ್ಲಿ ಗಂಟು ಇತ್ತು. ಎರಡು ವರ್ಷದ ನಂತರ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ವೈದ್ಯರು ಸೂಚಿಸಿದ್ದರು. ಅದರಂತೆ ಬುಧವಾರ ಫೆ. 16ರಂದು ಮಗುವನ್ನು ಕಿಮ್ಸ್’ಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಸಂದರ್ಭ ವೈದ್ಯರ ನಿರ್ಲಕ್ಷದಿಂದ ಮಗುವಿಗೆ ತೀವ್ರ ರಕ್ತಸ್ರಾವವಾಗಿ ಅದು ಮೃತಪಟ್ಟಿದೆ ಎಂದು ತಾಜ್ ನಗರದ ನಿವಾಸಿ ಮಗುವಿನ ತಂದೆ ಆರೋಪಿಸಿದ್ದಾರೆ.

ನಮ್ಮಿಂದ ಅನುಮತಿ ಪಡೆಯದೆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ . ಇದು ಗಂಭೀರ ಶಸ್ತ್ರಚಿಕಿತ್ಸೆಯೋ ಅಲ್ಲವೋ ಎಂಬ ಯಾವ ಮಾಹಿತಿಯನ್ನೂ ನಮಗೆ ನೀಡಿಲ್ಲ. ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ಮಗಳು ನಗುತ್ತ, ಚಟುವಟಿಕೆಯಿಂದಲೇ ಇದ್ದಳು. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಅವಳು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮಗುವಿನ ಬಾಯಲ್ಲಿ ಗಂಟು ದೊಡ್ಡದಾಗಿತ್ತು. ಹೀಗಾಗಿ ಮಗುವನ್ನು ಕರೆತರಲಾಗಿತ್ತು. ವೈದ್ಯರು ರಕ್ತನಾಳ ಗಂಟು ಎಂದು ಪತ್ತೆ ಹಚ್ಚಿದ್ದರು. ಅದಕ್ಕೆ ಒಂದು ಇಂಜೆಕ್ಸನ್ ಮಾಡಲಾಗಿತ್ತು. ಆಗ ಅಧಿಕ ರಕ್ತಸ್ರಾವ ಆಗಿದ್ದರಿಂದ ಮಗುವನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಎಂಬೊಲೈಸ್ ಮಾಡಿ ರಕ್ತ ಸ್ರಾವ ನಿಲ್ಲಿಸಲಾಗಿತ್ತು. ನಂತರ ಪುನಃ ಕಿಮ್ಸ್’ಗೆ ತಂದು ಐಸಿಯುನಲ್ಲಿ ದಾಖಲಿಸಲಾಗಿದೆ. ಒಂದು ದಿನದ ಎಂಬೋಲೈಸ್ ತೆಗೆದಾಗ ಮತ್ತೆ ರಕ್ತ ಸ್ರಾವವಾಗಿದೆ. ಮಗುವಿಗೆ ಆರು ಬಾಟಲಿ ರಕ್ತ ನೀಡಿದ್ದರೂ ಮಗುವನ್ನು ರಕ್ಷಿಸಲು ಆಗಲಿಲ್ಲ, ಯಾವುದೇ ವೈದ್ಯಕೀಯ ನಿರ್ಲಕ್ಷ್ಯ ಆಗಿಲ್ಲ ಎಂದು ಕಿಮ್ಸ್‌ ಆಸ್ಪತ್ರೆ ಹೇಳಿದೆ.

ಓದಿರಿ :-   ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ