ಹಿಜಾಬ್‌ ವಿವಾದ: ಕೆಲಸಕ್ಕೆ ರಾಜೀನಾಮೆ ನೀಡಿದ ಕಾಲೇಜ್‌ ಉಪನ್ಯಾಸಕಿ

ತುಮಕೂರು: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ತುಮಕೂರು ಅತಿಥಿ ಉಪನ್ಯಾಸಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಚಾಂದಿನಿ ಎಂಬವರು ರಾಜೀನಾಮೆ ನೀಡಿದ ಅತಿಥಿ ಉಪನ್ಯಾಸಕಿ.
ತುಮಕೂರಿನ ತಿಪಟೂರು ಮೂಲದ ಚಾಂದಿನಿ ಅವರು ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಹಿಜಾಬ್‌ ವಿವಾದ ಉಂಟಾದ ನಂತರ ಕಾಲೇಜು ಆಡಳಿತ ಮಂಡಳಿ ಅವರಿಗೆ ಹಿಜಾಬ್‌ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ ನೀಡಿತ್ತು ಎನ್ನಲಾಗಿದೆ. ಪ್ರತಿ ನಿತ್ಯ ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುತ್ತಿದ್ದ ಚಾಂದಿನಿ ಅವರು ಸದ್ಯ ಹಿಜಾಬ್ ವಿವಾದ ಉಂಟಾದ ಪರಿಣಾಮ ಜೈನ್ ಕಾಲೇಜಿನ‌ ಅತಿಥಿ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಂಗ್ಲಿಷ್ ಭಾಷೆಯ ವಿಚಾರ ಬೋಧನೆ ಮಾಡುತ್ತಿದ್ದ ಅವರು ಕೆಲಸಕ್ಕಿಂತ ಧರ್ಮ ಮುಖ್ಯ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement