ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಇಳಿಕೆ ಮುಂದುವರೆದಿದ್ದು, ಶನಿವಾರ ಹೊಸದಾಗಿ 1,137 ಸೋಂಕು ದಾಖಲಾಗಿದೆ ಹಾಗೂ 20 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 39,35,585ಕ್ಕೆ ಏರಿಕೆಯಾಗಿದೆ ಹಾಗೂ ಸಾವಿನ ಸಂಖ್ಯೆ 39,777ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದೇವೇಳೆ ರಾಜ್ಯದಲ್ಲಿ 3,870 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 38,82,340ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 13,431ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ. 1.43ಕ್ಕೆ ಇಳಿದಿದೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಇಂದು 646 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 17,75,342ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೋನಾದಿಂದ 8 ಮಂದಿ ಮೃತಪಟ್ಟಿದ್ದಾರೆ
ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 07, ಬಳ್ಳಾರಿ 19, ಬೆಳಗಾವಿ 42, ಬೆಂಗಳೂರು ಗ್ರಾಮಾಂತರ 05, ಬೆಂಗಳೂರು ನಗರ 646, ಬೀದರ್ 5, ಚಾಮರಾಜನಗರ 13, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 07, ಚಿತ್ರದುರ್ಗ 27, ದಕ್ಷಿಣ ಕನ್ನಡ 33, ದಾವಣಗೆರೆ 2, ಧಾರವಾಡ 18, ಗದಗ 2, ಹಾಸನ 21, ಹಾವೇರಿ 12, ಕಲಬುರಗಿ 11, ಕೊಡಗು 28, ಕೋಲಾರ 06, ಕೊಪ್ಪಳ 07, ಮಂಡ್ಯ 28 ಮೈಸೂರು 64, ರಾಯಚೂರು 9, ರಾಮನಗರ 10, ಶಿವಮೊಗ್ಗ 28, ತುಮಕೂರು 35, ಉಡುಪಿ 21, ಉತ್ತರ ಕನ್ನಡ 09, ವಿಜಯಪುರ 17 ಹಾಗೂ ಯಾದಗಿರಿಯಲ್ಲಿ 2 ಹೊಸ ಪ್ರಕರಣ ಪತ್ತೆಯಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ