ಅವಶ್ಯಕತೆಯು ಆವಿಷ್ಕಾರದ ತಾಯಿ ಎಂದು ಹೇಳಲಾಗುತ್ತದೆ. ಬಿಹಾರದ ಬಗಾಹಾದಲ್ಲಿ ಒಬ್ಬ ಮೆಕ್ಯಾನಿಕ್ ಕಮ್ ಆರ್ಟಿಸ್ಟ್ ಆವಿಷ್ಕಾರದ ಬಗ್ಗೆ ಯೋಚಿಸಿದರು ಮತ್ತು ಅವರ ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಭಾರತೀಯ ಮದುವೆ ಸಮಾರಂಭಗಳಲ್ಲಿ ವಧು ವರರನ್ನು ಕರೆತರಲು ವಿವಿಧ ರೀತಿಯ ಪ್ಲಾನ್ ಮಾಡುತ್ತಾರೆ. ಕುದುರೆಗಳ ಮೇಲೆ ವರನನ್ನು ಕರೆತರುತ್ತಾರೆ, ವರ ಕಾರಿನಲ್ಲಿ ಬರುತ್ತಾರೆ, ವಧುವನ್ನು ಪಲ್ಲಕ್ಕಿಯ ಮೇಲೆ ಕರೆತರುತ್ತಾರೆ. ಹೀಗೆ ವಿಭಿನ್ನವಾಗಿ ವಧು-ವರರು ಮಂಟಪಕ್ಕೆ ಆಗಮಿಸುತ್ತಾರೆ. ಆದರೆ ಇದಕ್ಕೆಲ್ಲಾ ಹಣವೂ ಅಷ್ಟೇ ಖರ್ಚಾಗುತ್ತದೆ. ಆದರೆ ಈ ವ್ಯಕ್ತಿ ಈಗ ನ್ಯಾನೋ ಕಾರನ್ನು(Nano Car) ಹೆಲಿಕಾಪ್ಟರ್ (Helicopter) ಆಗಿ ಪರಿವರ್ತಿಸಿ, ಅದನ್ನು ಮದುವೆ ಮೆರವಣಿಗೆಗೆ ಬಾಡಿಗೆ ನೀಡುತ್ತಿದ್ದಾರೆ. ಅದ್ಯ ಈ ಕಾರು ಮದುವೆ ಮನೆಗಳಲ್ಲಿ ಬಹು ಬೇಡಿಕೆಯ ವಾಹನವಾಗಿದೆ. ಈ ನ್ಯಾನೋ ಕಾರಿನ ಹೆಲಿಕಾಪ್ಟರ್ ಸಖತ್ ವೈರಲ್ ಆಗಿದೆ.
ಇದನ್ನು ಬಿಹಾರದ ಬಾಗಹಾ ಪ್ರದೇಶದ ಮೆಕ್ಯಾನಿಕ್ ಗುಡ್ಡು ಶರ್ಮಾ ಎನ್ನುವವರು ಅಭಿವೃದ್ಧಿಪಡಿಸಿದ್ದಾರೆ. 2 ಲಕ್ಷ ರೂಗಳನ್ನು ಖರ್ಚು ಮಾಡಿ ಅವರು ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ ಹಾಗೂ ಒಂದು ದಿನಕ್ಕೆ ಈ ನ್ಯಾನೋ ಹೆಲಿಕಾಪ್ಟರ್ನ ಬಾಡಿಗೆ 15 ಸಾವಿರ ರೂ.ಗಳಷ್ಟು ನಗದಿ ಮಾಡಲಾಗಿದೆ. ಸದ್ಯ ಬಿಹಾರದ ಬಾಗಹಾ ಸುತ್ತ ಮುತ್ತ ಪ್ರದೇಶಗಳಲ್ಲಿ ಈ ನ್ಯಾನೋ ಕಾರಿನ ಹೆಲಿಕಾಪ್ಟರ್ಗೆ ಸಖತ್ ಬೇಡಿಕೆ ಬಂದಿದೆ. ಈಗಾಗಲೇ ಈಹೆಲಿಕಾಪ್ಟರ್ ಅನ್ನು 19 ಜನ ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ.
ಗುಡ್ಡು ಶರ್ಮಾ ಅವರು ತಮ್ಮ ಆವಿಷ್ಕಾರದ ಬಗ್ಗೆ ಮಾತನಾಡಿ, “ಡಿಜಿಟಲ್ ಇಂಡಿಯಾದ ಯುಗದಲ್ಲಿ, ಈ ಆವಿಷ್ಕಾರವು ಸ್ವಾವಲಂಬಿ ಭಾರತಕ್ಕೆ ಜೀವಂತ ಉದಾಹರಣೆಯಾಗಿದೆ. ಇಂತಹ ‘ಹೆಲಿಕಾಪ್ಟರ್’ ತಯಾರಿಸಲು ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ಬೇಕಾಗುತ್ತದೆ, ಆದರೆ ಹೈಟೆಕ್ ರೂಪ ನೀಡಲು ಎರಡು ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತದೆ. ಇದರ ಬಾಡಿಗೆ ದಿನಕ್ಕೆ 15,000 ರೂ.ಎಂದು ಹೇಳಿದ್ದಾರೆ.
ಈ ಹಿಂದೆ ಛಾಪ್ರಾ ಗ್ರಾಮದ ಮಿಥಿಲೇಶ್ ಪ್ರಸಾದ್ ಎಂಬವರು ಪೈಲಟ್ ಆಗಲು ಬಯಸಿದ್ದರು, ಆದರೆ ಅದನ್ನು ಮುಂದುವರಿಸಲು ಸಾಧ್ಯವಾಗದೆ, ತನ್ನ ನಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದರು. ರೋಟರ್ ಬ್ಲೇಡ್, ಟೈಲ್ ಬೂಮ್ ಮತ್ತು ರೋಟರ್ ಮಾಸ್ಟ್ ಅನ್ನು ಸೇರಿಸುವ ಮೂಲಕ ಅವರು ತಮ್ಮ ಕಾರನ್ನು ಹೆಲಿಕಾಪ್ಟರ್ ನೋಟದೊಂದಿಗೆ ಕಸ್ಟಮೈಸ್ ಮಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ