ಸಾಂಪ್ರದಾಯಿಕ ಚಿಂತನೆಗಿಂತ ಮೇಲೇರಿ, ಹಿಜಾಬ್‌ಗಿಂತ ಶಿಕ್ಷಣ ಮುಖ್ಯ, ಯಾಕೆಂದರೆ ಮುಸ್ಲಿಂ ಜನಸಂಖ್ಯೆಯ 2.75%ರಷ್ಟು ಮಾತ್ರ ಪದವಿ ಶಿಕ್ಷಣ ಪಡೆದವರು: ಮುಸ್ಲಿಂ ರಾಷ್ಟ್ರೀಯ ಮಂಚ್ ಮನವಿ

ನವದೆಹಲಿ: ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಶನಿವಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಂಪ್ರದಾಯಿಕ ಚಿಂತನೆಗಿಂತ ಮೇಲೇರುವಂತೆ ಮತ್ತು ಪ್ರಗತಿಪರ ವಿಚಾರಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕಿಂತ ಶಿಕ್ಷಣವು ಅದರ ಪ್ರಗತಿಗೆ ಮುಖ್ಯವಾಗಿದೆ ಎಂದು ಅದು ಹೇಳಿದೆ.

ಭಾರತದಲ್ಲಿ ಮುಸ್ಲಿಮರು ಅತಿ ಹೆಚ್ಚು ಅಂದರೆ ಶೇಕಡ 43ರಷ್ಟು ಅನಕ್ಷರತೆಯನ್ನು ಹೊಂದಿದೆ, ಸಮುದಾಯದಲ್ಲಿ ನಿರುದ್ಯೋಗದ ಪ್ರಮಾಣವೂ ತುಂಬಾ ಹೆಚ್ಚಾಗಿದೆ, ಭಾರತದಲ್ಲಿನ ಒಟ್ಟು ಮುಸ್ಲಿಂ ಜನಸಂಖ್ಯೆಯ ಶೇಕಡಾ 2.75 ರಷ್ಟು ಜನರು ಮಾತ್ರ ಪದವಿ ಅಥವಾ ಈ ಮಟ್ಟದ ಶಿಕ್ಷಣವನ್ನು ಹೊಂದಿದ್ದಾರೆ. ಅವರಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ.36.65. ಮುಸ್ಲಿಮರಲ್ಲಿ ಶಾಲೆ ಬಿಡುವವರ ಪ್ರಮಾಣ ಅತ್ಯಧಿಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಬಾಲಕಿಯರ ಶಾಲೆ ಬಿಡುವ ಪ್ರಮಾಣ ಬಾಲಕರಿಗಿಂತ ಹೆಚ್ಚಿದೆ ಎಂದು ಸಂಸ್ಥೆ ಹೇಳಿದೆ.
ಮುಸ್ಲಿಮರು ಏಕೆ ಕಡಿಮೆ ಸಾಕ್ಷರತೆಯ ಪ್ರಮಾಣವನ್ನು ಹೊಂದಿದ್ದಾರೆಂದು ಯೋಚಿಸಬೇಕು. ಭಾರತದ ಮುಸ್ಲಿಮರು ಪ್ರಗತಿಪರ ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಅವರಿಗೆ ಪುಸ್ತಕ ಬೇಕು, ಹಿಜಾಬ್ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಅವರು ಸಾಂಪ್ರದಾಯಿಕ ಚಿಂತನೆಗಿಂತ ಮೇಲೇರಬೇಕು ಮತ್ತು ಶಿಕ್ಷಣ ಮತ್ತು ಪ್ರಗತಿಯತ್ತ ಗಮನ ಹರಿಸಬೇಕು ಎಂದು ಆರ್‌ಎಸ್‌ಎಸ್-ಸಂಯೋಜಿತ ಎಂಆರ್‌ಎಂ ರಾಷ್ಟ್ರೀಯ ಸಂಚಾಲಕ ಮತ್ತು ವಕ್ತಾರ ಶಾಹಿದ್ ಸಯೀದ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಸುಮಾರು 20 ಕೋಟಿ ಇರುವಾಗ ನಮ್ಮಲ್ಲಿ ಕಡಿಮೆ ಶೇಕಡಾವಾರು ಪದವೀಧರರಿದ್ದಾರೆ ಏಕೆ ಎಂದು ನಾವು ಯೋಚಿಸಬೇಕು. ಅದು ಸರ್ಕಾರಿ ಕ್ಷೇತ್ರವಾಗಲಿ ಅಥವಾ ಖಾಸಗಿ ವಲಯವಾಗಲಿ, ಉದ್ಯೋಗದಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ತುಂಬಾ ಕಡಿಮೆಯಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ವಿರುದ್ಧ ಯಾವುದೇ ಪಕ್ಷಪಾತದಿಂದಾಗಿ ಅಲ್ಲ. ಒಂದು ಸಮುದಾಯವು ಕಡಿಮೆ ಶೇಕಡಾವಾರು ಪದವೀಧರರನ್ನು ಹೊಂದಿರುವಾಗ ಅದರ ಸದಸ್ಯರು ಹಿಂದೆ ಉಳಿಯುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿರುವುದು ಮುಸ್ಲಿಂ ಮಹಿಳೆಯರನ್ನು ಈ ಹಳೆಯ ಪದ್ಧತಿಯ ನೋವಿನಿಂದ ಮುಕ್ತಗೊಳಿಸಿದೆ ಎಂದು ಎಂಆರ್‌ಎಂ ಸಂಚಾಲಕರು ಹೇಳಿದರು.

ಇದು ಮುಸ್ಲಿಂ ಮಹಿಳೆಯರ ಸ್ವಾಭಿಮಾನ ಮತ್ತು ಘನತೆಯ ಕಾನೂನು. ಇಂದು ಅವರ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಾನೂನು ಜಾರಿಗೆ ಬಂದ ನಂತರ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮಹಿಳೆಯರಿಗೆ ಪರಿಹಾರ ಸಿಕ್ಕಿದೆ. ಜನರು ತಮ್ಮ ಕುಟುಂಬಕ್ಕೆ ಘನತೆಯಿಂದ ಬದುಕುವ ಹಕ್ಕನ್ನು ನೀಡುತ್ತಿದ್ದಾರೆ. ಮುಸ್ಲಿಂ ಹುಡುಗಿಯರು, ಯುವಕರು ಮತ್ತು ಮಹಿಳೆಯರು ಇಂದು ಪ್ರಗತಿಪರರಾಗಿದ್ದಾರೆ ಆದರೆ “ಮತಾಂಧರು ಮತ್ತು ಧಾರ್ಮಿಕ ಮುಖಂಡರು” ಅವರು ಸಾಂಪ್ರದಾಯಿಕತೆ ಮತ್ತು ಧರ್ಮಾಂಧತೆಯ ಸಂಕೋಲೆಯಲ್ಲಿ ಮಹಿಳೆಯರು ಉಳಿಯಬೇಕೆಂದು ಬಯಸುತ್ತಾರೆ. ಧರ್ಮವು ನಿಮ್ಮ ಹೃದಯದಲ್ಲಿ ಇಟ್ಟುಕೊಳ್ಳಬೇಕಾದದ್ದು, ತೋರಿಸಿಕೊಳ್ಳಲು ಅಲ್ಲ. ಮುಸ್ಲಿಂ ಪುರುಷ ಅಥವಾ ಮಹಿಳೆ ಭಾರತೀಯ ಸೇನೆಯಲ್ಲಿದ್ದರೆ, ಅವರ ಡ್ರೆಸ್ ಕೋಡ್ ಕುರ್ತಾ ಪೈಜಾಮ ಅಥವಾ ಹಿಜಾಬ್ ಅನ್ನು ಒಳಗೊಂಡಿರುವುದಿಲ್ಲ. ಅದೇ ರೀತಿ ಪ್ರತಿಯೊಂದು ಶಾಲೆ ಅಥವಾ ಕಾಲೇಜು ತನ್ನದೇ ಆದ ಡ್ರೆಸ್ ಕೋಡ್ ಹೊಂದಿದ್ದು, ಅದನ್ನು ನಾವು ಪಾಲಿಸಬೇಕು ಎಂದು ಮನವಿ ಮಾಡಿದರು.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement