ಅಪರೂಪದ ಮದುವೆ..ವರ ಮೂರೂವರೆ ಅಡಿ, ವಧು ಐದೂವರೆ ಅಡಿ..!

posted in: ರಾಜ್ಯ | 0

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಪರೂಪದ ಮದುವೆ ನಡೆಯಿತು. ಕುಬ್ಜ ಯುವಕ ಹಾಗೂ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವರನ ಎತ್ತರ ಮೂರುವರೆ ಅಡಿ ಇದ್ದರೆ, ವಧುವಿವಿನ ಎತ್ತರ 5 ಅಡಿ 3 ಇಂಚು ಎತ್ತರವಿದ್ದಾಳೆ. ಇಬ್ಬರ ಮನೆಯವರು ಈ ಮದುವೆಗೆ ಒಪ್ಪಿಗೆ ನೀಡಿ ಸಂಪ್ರದಾಯದಂತೆ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮದುವೆ ನಡೆದಿದೆ.
30 ವರ್ಷದ ಕುಬ್ಜ ಬಸವರಾಜ ಕುಂಬಾರ ಕನ್ಯೆಗಾಗಿ ಹುಡುಕುತ್ತಿದ್ದ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿನ 22 ವಯಸ್ಸಿನ ಯುವತಿ ರುಕ್ಮಿಣಿಯೊಂದಿಗೆ ಈಗ ಮದುವೆಯಾಗಿದೆ. ಮದುವೆಗೆ ಯಾರ ಒತ್ತಡವೂ ಇಲ್ಲ, ಪ್ರೀತಿಯಿಂದ ಒಪ್ಪಿಯೇ ಮದುವೆಯಾಗುತ್ತಿದ್ದೇನೆ ಎಂದು ರುಕ್ಮಿಣಿ ಹೇಳಿದ್ದಾರೆ.
ಬಸವರಾಜ ಪಾನ್ ಶಾಪ್ ಇಟ್ಟುಕೊಂಡಿದ್ದಾನೆ. ಬಸವರಾಜ ಅವರು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಆಗಿಲ್ಲ. ಬಸವರಾಜ ಕೈಹಿಡಿಯಲು ರುಕ್ಷ್ಮಿಣಿ ಕುಂಬಾರ ಒಪ್ಪಿಯೇ ಮದುವೆಯಾಗಿದ್ದಾಳೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಯುವಕನ ಕೈಗೆ ಮಗುಕೊಟ್ಟು ಮಹಿಳೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರೀತಿಗೆ ಅಡ್ಡಿಯಾದ ಮಗುವನ್ನು ದೂರ ಮಾಡಲು ಪ್ರೇಮಿ-ಪ್ರೇಮಿಕಾ ಮಾಡಿದ ಬೃಹನ್ನಾಟಕ ಬೆಳಕಿಗೆ..!
advertisement

ನಿಮ್ಮ ಕಾಮೆಂಟ್ ಬರೆಯಿರಿ