ಕಣ್ಣೂರು: ಉತ್ತರ ಕೇರಳ ಜಿಲ್ಲೆಯ ಕಣ್ಣೂರಿನ ಪುನ್ನೋಲ್‌ನಲ್ಲಿ ಸೋಮವಾರ ಮುಂಜಾನೆ ಸಿಪಿಐ(ಎಂ) ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ.
ಕೊರಂಬಿಲ್ ಹರಿದಾಸನ್ (54) ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೆಳಗಿನ ಜಾವ 1:30ರ ಸುಮಾರಿಗೆ ಅವರ ಮನೆಯ ಮುಂದೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ.
ಶಬ್ದ ಕೇಳಿ ಸ್ಥಳಕ್ಕಾಗಮಿಸಿದ ಕೆಲವು ಸ್ಥಳೀಯರು ಅವರನ್ನು ತಲಶ್ಶೇರಿಯ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಒಂದು ಕಾಲನ್ನು ಕತ್ತರಿಸಲಾಗಿದ್ದು, ಅವರ ದೇಹದ ಮೇಲೆ ಹಲವು ಕಡೆ ಇರಿತದ ಗಾಯಗಳು ಕಂಡುಬಂದಿದ್ದು, ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲಶ್ಶೇರಿ ಸಮೀಪದ ನ್ಯೂ ಮಾಹೆಯಲ್ಲಿ ಮೀನುಗಾರರಾಗಿದ್ದ ಹರಿದಾಸನ್ ಅವರು ಸಿಪಿಐ(ಎಂ) ಪಕ್ಷದ ಸಕ್ರಿಯ ಸದಸ್ಯರಾಗಿದ್ದರು.
ಸಿಪಿಐ(ಎಂ) ಇದನ್ನು “ರಾಜಕೀಯ ಕೊಲೆ” ಎಂದು ಕರೆದಿದೆ ಮತ್ತು ಪಕ್ಷದ ಕಾರ್ಯಕರ್ತನ ಸಾವಿನ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರೇರಿತ ಗುಂಪನ್ನು ದೂಷಿಸಿದೆ. ಆದರೆ ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದೆ.
ಹತ್ಯೆಯನ್ನು ಪ್ರತಿಭಟಿಸಿ ಇಂದು ತಲಶ್ಶೇರಿ ಪುರಸಭೆ ಮತ್ತು ನ್ಯೂಮಾಹೆ ಪಂಚಾಯತಿಯಲ್ಲಿ ಪಕ್ಷವು ಹರತಾಳಕ್ಕೆ ಕರೆ ನೀಡಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ