ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಆರೋಪಿಗಳಿಬ್ಬರ ಹೆಸರು ಬಹಿರಂಗ

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಬ್ಬರು ಪ್ರಮುಖ ಆರೋಪಿಗಳ ಹೆಸರು ಬಹಿರಂಗವಾಗಿದೆ.
ಶಿವಮೊಗ್ಗದ ಬುದ್ಧನಗರದ ಖಾಸಿಫ್ (30) ಮತ್ತು ಜೆಪಿ‌ ನಗರದ ಸೈಯದ್ ನದೀಮ್ (20) ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ನಡೆದು 24 ಗಂಟೆಗಳ ಶಿವಮೊಗ್ಗ ಪೊಲೀಸರನ್ನೊಳಗೊಂಡ ವಿಶೇಷ ತಂಡ ಇವರನ್ನು ಬಂಧಿಸಿದೆ. ಒಳಗಾಗಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದೆ. ಆರೋಪಿಗಳ ಪತ್ತೆಗೆ ಡಿಸಿಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಮೊದಲು ಖಾಸಿಫ್‌ ಎಂಬಾತನನ್ನು ಬಂಧಿಸಲಾಗಿದ್ದು, ಆತನ ನೀಡಿದ ಮಾಹಿತಿ ಮೇರೆಗೆ ನದೀಮ್‌ನನ್ನು ಬಂಧಿಲಾಗಿದೆ. ಮತ್ತೊಬ್ಬನನ್ನು ಬಂಧಿಸಲಾಗಿದೆ, ಆದರೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.
ಖಾಸಿಫ್ ನನ್ನು ಶಿವಮೊಗ್ಗದ ಕ್ಲಾರ್ಕ್‌ಪೇಟೆಯಿಂದ ಬಂಧಿಸಲಾಗಿದ್ದು, ಉಳಿದ ಇಬ್ಬರನ್ನು ಖಾಸಿಫ್ ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನಿಂದ ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ಹತ್ಯೆಯ ನಂತರ ತಾಳಗುಪ್ಪ-ಬೆಂಗಳೂರು ರೈಲಿನ ಮೂಲಕ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಮೇಲೆ ಐವರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆಗೆ ಹಿಂದೆ ಹಿಜಾಬ್ ವಿವಾದ ಕಾರಣ ಎಂಬುದನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ, “ಇದು ವಿಭಿನ್ನ ಕಾರಣಗಳಿಗಾಗಿ ನಡೆದಿದೆ” ಎಂದು ಹೇಳಿದೆ. ‘‘ಹಿಜಾಬ್ ವಿಚಾರಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಮತ್ತು ಇದು ಬೇರೆ ಬೇರೆ ಕಾರಣಗಳಿಂದ ನಡೆದಿದೆ ಎಂದು ಸರ್ಕಾರ ಹೇಳಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement