ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ನಿಧನ

posted in: ರಾಜ್ಯ | 0

ಬೆಂಗಳೂರು: ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರೆಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿದ್ದ ರಚನಾ ತಮ್ಮ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು.
ಜೆಪಿ ನಗರದ ಪ್ಲಾಟ್‌ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ತಮ್ಮ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದ ಮುದ್ದು ಮುಖದ ರಚನಾಗೆ 39 ವರ್ಷ ವಯಸ್ಸಾಗಿತ್ತು. ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಸೇರಿದಂತೆ ವಿವಿಧ ರೇಡಿಯೋ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದ ಾರಳು ಹುರಿದಂತೆ ಮಾತನಾಡುವ ಮೂಲಕ ಚಿರಪರಿಚಿತರಾಗಿದ್ದರು.
‘ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಸಿನಿಮಾದಲ್ಲಿ ಆರ್.ಜೆ ರಚನಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ಅವರು ಆರ್.ಜೆ ಆಗಿಯೇ ಕಾಣಿಸಿಕೊಂಡಿದ್ದು ವಿಶೇಷ. ತೀವ್ರ ಹೃದಯಾಘಾತದಿಂದ ನಿಧನರಾದ ಆರ್.ಜೆ ರಚನಾ (39) ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಮುಂದಿನ 15 ದಿನಗಳ ಕಾಲ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ:ಸಿಎಂ ಬೊಮ್ಮಾಯಿ ಸೂಚನೆ
advertisement

ನಿಮ್ಮ ಕಾಮೆಂಟ್ ಬರೆಯಿರಿ