ಸ್ವಾಮಿ ಗಂಗೇಶಾನಂದರ ಮರ್ಮಾಂಗ ಕತ್ತರಿಸಿದ ಪ್ರಕರಣಕ್ಕೆ ದೊಡ್ಡ ತಿರುವು: 5 ವರ್ಷಗಳ ಹಿಂದಿನ ಪಿತೂರಿ ಬಯಲಾಯ್ತು..!

ತಿರುವನಂತಪುರಂ: ಕೇರಳದಲ್ಲಿ ಹಿಂದೂ ಸಂತನ ಮರ್ಮಾಂಗ ಕತ್ತರಿಸಿದ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ ಪೊಲೀಸರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ವರದಿಯ ಪ್ರಕಾರ, ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಯುವತಿ ತನ್ನ ಗೆಳೆಯನೊಂದಿಗೆ ಒಟ್ಟಿಗೆ ವಾಸಿಸಲು ಸ್ವಾಮೀಜಿ ಅಡ್ಡಿಯಾಗಿದ್ದಾರೆ ಎಂದು ತಿಳಿದಿದ್ದಳು. ಹೀಗಾಗಿ ಸ್ವಾಮೀಜಿಯವರ ವಿರುದ್ಧ ಪೀತೂರಿ ಅಂಗವಾಗಿ ಬೃಹನ್‌ ನಾಟಕ ನಡೆಸಿದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಲು ಕ್ರೈಂ ಬ್ರಾಂಚ್ ಈಗ ಕಾನೂನು ಸಲಹೆ ಕೇಳಿದೆ.
ತನಿಖೆಯು ಸ್ವಾಮೀಜಿ ವಿರುದ್ಧ ದೂರುದಾರ ಯುವತಿ ಮತ್ತು ಆಕೆಯ ಗೆಳೆಯ ಅಯಪ್ಪದಾಸ ಅವರ ಪಿತೂರಿಯನ್ನು ಅಪರಾಧ ವಿಭಾಗ (ಸಿಬಿ) ಬಹಿರಂಗಪಡಿಸಿದೆ.
ಯುವತಿ ಹಾಗೂ ಅಯ್ಯಪ್ಪದಾಸ ಒಟ್ಟುಗೂಡುವುದಕ್ಕೆ ಗಂಗೇಶಾನಂದರು ಅಡ್ಡಿಯಾಗುತ್ತಾರೆ ಎಂದು ಭಾವಿಸಿ ಇಬ್ಬರೂ ಗಂಗೇಶಾನಂದ ವಿರುದ್ಧ ಪಿತೂರಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಇಬ್ಬರನ್ನು ಆರೋಪಿಗಳೆಂದು ಹೆಸರಿಸುವಂತೆ ಅಪರಾಧ ವಿಭಾಗ ಕಾನೂನು ಸಲಹೆ ಕೇಳಿದೆ.

ಏನಿದು ಪ್ರಕರಣ..?
ಯುವತಿ ಮತ್ತು ಅಯ್ಯಪ್ಪದಾಸ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದರು. ಆದರೆ ಮಹಿಳೆಯ ಮನೆಯವರ ಮೇಲೆ ಹೆಚ್ಚಿನ ಪ್ರಭಾವ ಹೊಂದಿದ್ದ ಸ್ವಾಮಿ ಗಂಗೇಶಾನಂದರು ಇದನ್ನು ತಡೆಯುತ್ತಾರೆ ಎಂದು ಭಾವಿಸಿ ಇಬ್ಬರೂ ವರ್ಕಲಾ ಮತ್ತು ಕೊಲ್ಲಂನಲ್ಲಿ ಭೇಟಿಯಾಗಿ ಸಂಚು ರೂಪಿಸಿದ್ದರು. ಸಂಚಿನ ಭಾಗವಾಗಿ ಯುವತಿ ಸ್ವಾಮಿ ಗಂಗೇಶಾನಂದರ ಮರ್ಮಾಂಗ  ಕತ್ತರಿಸಿದ್ದಳು. ಈ ಘಟನೆ 2017ರಲ್ಲಿ ನಡೆದಿತ್ತು. ಮೇ 19 ಮತ್ತು 20, 2017 ರ ಮಧ್ಯರಾತ್ರಿ ತನ್ನ ಮನೆಯಲ್ಲಿ ಸ್ವಾಮಿ ಗಂಗೇಶಾನಂದರು ತನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ತಾನು ಗಂಗೇಶಾನಂದರ ಮರ್ಮಾಂಗ ಕತ್ತರಿಸಿದೆ ಎಂದು ಮಹಿಳೆಯು ಪೆಟ್ಟಾ ಪೊಲೀಸರಿಗೆ ನೀಡಿದ ಮೊದಲ ದೂರಿನಲ್ಲಿ ತಿಳಿಸಿದ್ದಳು. ಬಳಿಕ ತನ್ನ ನಿಲುವು ಬದಲಿಸಿದ ಯುವತಿ ಸ್ವಾಮಿ ಗಂಗೇಶಾನಂದ ಪರ ಹೇಳಿಕೆ ನೀಡಿದ್ದಳು. ಪೊಲೀಸರು ವಿವಿಧ ಅಂಶಗಳ ಮೇಲೆ ತನಿಖೆ ನಡೆಸಿದರು ಮತ್ತು ಇತ್ತೀಚಿನ ತನಿಖೆಯಲ್ಲಿ ಸ್ವಾಮಿ ಗಂಗೇಶಾನಂದರ ವಿರುದ್ಧ ಮಹಿಳೆ ಪಿತೂರಿ ಹಾಗೂ ಆಕೆಯ ಪ್ರಿಯಕರ ಅಯ್ಯಪ್ಪದಸ ಪಿತೂರಿ ನಡೆಸಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಸ್ವಾಮೀಜಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು, ಇದಕ್ಕಾಗಿ ಆತ್ಮರಕ್ಷಣೆಗಾಗಿ ತಾನು ಹಾಗೆ ಮಾಡಿದೆ ಎಂದು ದೂರು ನೀಡುವ ಮೊದಲು ಯುವತಿ ಹಾಗೂ ಆಕೆಯ ಪ್ರಿಯಕರ ಇಬ್ಬರೂ ಅಂತರ್ಜಾಲದಲ್ಲಿ ಇದಕ್ಕೆ ಸಂಬಂಧಿತ ದೃಶ್ಯಗಳನ್ನು ನೋಡಿದ್ದಾರೆ ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುದನ್ನು ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ವರದಿಯ ಪ್ರಕಾರ, ಗಂಗೇಶಾನಂದ ವಿರುದ್ಧ ಸಂಚು ರೂಪಿಸಲು ಇಬ್ಬರೂ ವರ್ಕಲಾ ಮತ್ತು ಕೊಲ್ಲಂನಲ್ಲಿ ಭೇಟಿಯಾದರು. ಮರ್ಮಾಂಗವನ್ನು ಹೇಗೆ ಕತ್ತರಿಸಬೇಕು ಎಂಬ ವಿಡಿಯೋವನ್ನು ವೀಕ್ಷಿಸಿದ್ದು, ಇದಕ್ಕೆ ಸಿದ್ಧತೆಗಳ ಮಾಡಿಕೊಂಡಿರುವುದರ ವೈಜ್ಞಾನಿಕ ಪರೀಕ್ಷೆ ಬಳಿಕ ಯುವತಿಯ ವಿರುದ್ಧ ಸಾಕ್ಷ್ಯ ಪೊಲೀಸರಿಗೆ ಸಿಕ್ಕಿದೆ. ಕಾನೂನು ಸಲಹೆ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲು ತನಿಖಾ ತಂಡ ನಿರ್ಧರಿಸಿದೆ.
ಪೊಲೀಸ್‌ ಅಪರಾಧ ವಿಭಾಗದಿಂದ ಪ್ರಸ್ತುತ ಬಹಿರಂಗಪಡಿಸುವಿಕೆಯು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದೆ ಮತ್ತು ಪ್ರಕರಣದ ಹೆಚ್ಚಿನ ತನಿಖೆಯನ್ನು ಆಧರಿಸಿದೆ. ಆರೋಪಿಗಳ ಪಟ್ಟಿಯಲ್ಲಿ ಇಬ್ಬರನ್ನು ಹೆಸರಿಸಲು ಕಾನೂನು ಸಲಹೆಯನ್ನು ನಿರೀಕ್ಷಿಸಲಾಗುತ್ತಿದೆ. ಒಪ್ಪಿಗೆ ದೊರೆತ ನಂತರ, ಮುಂದಿನ ಕಾರ್ಯವಿಧಾನಗಳನ್ನು ಕೈಗೊಳ್ಳಲಾಗುತ್ತದೆ ಎಂದು ವರದಿ ಹೇಳಿದೆ.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement