ಚಿತ್ತೂರು(ಆಂಧ್ರ ಪ್ರದೇಶ): ಸರ್ಪ ದ್ವೇಷ ಸಾಧಿಸುತ್ತದೆ ಎಂಬುದು ವಾಡಿಕಯಲ್ಲಿರುವ ಮತು. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಇಲ್ಲೊಂದು ಘಟನೆ ಹಾವು ನಿಜವಾಗಿಯೂ ದ್ವೇಷ ಸಾಧಸಿತ್ತದೆಯೇ ಎಂದು ವಿಚಾರ ಮಾಡುವಂತೆ ಮಾಡಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಲಯದಲ್ಲಿ ಕುಟುಂಬವೊಂದರ ಮೇಲೆ ಹಾವು ಹಗೆ ಸಾಧಿಸುವ ಘಟನೆ ವರದಿಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಒಂದೇ ಕುಟುಂಬದ ಮೂವರನ್ನು ಎರಡೆರಡು ಬಾರಿ ಹಾವು ಕಚ್ಚಿದೆಯಂತೆ. , ಸ್ಥಳೀಯರು ಸಕಾಲಕ್ಕೆ ಸಹಾಯಕ್ಕೆ ಧಾವಿಸಿದ ಕಾರಣದಿಂದಾಗಿ ಎಲ್ಲರೂ ಬದುಕುಳಿದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಡೋರ್ನಕಂಬಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವೆಂಕಟೇಶ ಮತ್ತು ವೆಂಕಟಮ್ಮ ದಂಪತಿ ತಮ್ಮ ಪುತ್ರ ಜಗದೀಶ ಎಂಬಾತನೊಂದಿಗೆ ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಕುಟುಂಬ ಗ್ರಾಮದ ಕೊನೆಯಲ್ಲಿರುವ ಗುಡ್ಡದಲ್ಲಿ ವಾಸವಾಗಿದೆ.
ಕಳೆದ ತಿಂಗಳು ಇವರೆಲ್ಲರಿಗೂ ಹಾವು ಕಚ್ಚಿತ್ತು. ಸ್ಥಳೀಯರು 108 ನಂಬರ್ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಎರಡು ದಿನಗಳ ಹಿಂದೆ ಅವರು ಡಿಸ್ಚಾರ್ಜ್ ಆಗಿ ಬಂದಿದ್ದರು. ವೆಂಕಟಮ್ಮ ಮತ್ತು ಜಗದೀಶ ಅವರಿಗೆ ಸೋಮವಾರ ಮತ್ತೆ ಹಾವು ಕಚ್ಚಿದೆ. ಸ್ಥಳೀಯರು ಮತ್ತೆ 108ಕ್ಕೆ ಕರೆ ಮಾಡಿ ಚಿಕಿತ್ಸೆಗಾಗಿ ತಿರುಪತಿ ರುಯಾ ಆಸ್ಪತ್ರೆಗೆ ಸಾಗಿಸಿದರು.. ಇದಕ್ಕೂ ಮುನ್ನ ವೆಂಕಟೇಶ ಅವರನ್ನು ಹಾವು ಕಚ್ಚಿತ್ತು ಎಂದು ವರದಿಗಳಿ ತಿಳಿಸಿವೆ.
ಒಂದೇ ಹಾವು ಮನೆಯವರಿಗೆ ಎರಡೆರಡು ಸಲ ಕಡಿದಿದೆಯೋ ಅಥವಾ ಬೇರೆಬೇರೆ ಹಾವುಗಳು ಕಡಿದಿವೆಯೋ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.
ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವುಗಳ ಕಾರಣದಿಂದಾಗಿ ಈ ಕುಟುಂಬ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಕುಟುಂಬದವರು ಹಾವಿನ ಕಿರುಕುಳದಿಂದ ತಮಗೆ ಮುಕ್ತಿ ದೊರಕಿಸಿ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ