ಮಾರ್ಚ್ 4ರಂದು ತಮ್ಮ ಮೊದಲ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ

posted in: ರಾಜ್ಯ | 0

ಬೆಂಗಳೂರು: ರಾಜ್ಯ ಮುಂಗಡ ಅಧಿವೇಶನ ಮಾರ್ಚ್ 4 ರಿಂದ 30 ರ ವರೆಗೆ ನಡೆಯಲಿದ್ದು, ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 4 ರಂದು ಮಧ್ಯಾಹ್ನ 12.30 ಕ್ಕೆ 2022-23 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
ಒಟ್ಟು 17 ದಿನಗಳ ಸದನದ ಕಾಲ ಕಲಾಪ ನಡೆಯಲಿದ್ದು ಬಜೆಟ್ ಮೇಲಿನ ಚರ್ಚೆ, ವಿಧೇಯಕಗಳ ಮಂಡನೆ ಸೇರಿದಂತೆ ಹಲವು ವಿಷಯಗಳು ಚರ್ಚೆಗ ಬರಲಿವೆ. ಮಾರ್ಚ್ 4 ರಿಂದ 30 ರ ವರೆಗೆ ತಾತ್ಕಾಲಿಕ ಕಲಾಪ‌ಪಟ್ಟಿ ಪ್ರಕಟಿಸಲಾಗಿದೆ.

ಫೆಬ್ರವರಿ 14 ರಂದು ಆರಂಭವಾದ ಅಧಿವೇಶನವು ಫೆಬ್ರವರಿ 25 ರಂದು ಮುಕ್ತಾಯವಾಗಬೇಕಿತ್ತು. ರಾಷ್ಟ್ರಧ್ವಜದ ಕುರಿತು ಹೇಳಿಕೆ ನೀಡಿದ್ದ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ನಡೆಸಿದ ಪ್ರತಿಭಟನೆಯಿಂದಾಗಿ ಸತತ ಐದನೇ ದಿನವೂ ವಿಧಾನಮಂಡಲದ ಜಂಟಿ ಅಧಿವೇಶನ ಮೊಟಕುಗೊಂಡ ಪರಿಣಾಮ ಅಧಿವೇಶನವನ್ನು ಮಾರ್ಚ್ 4 ಕ್ಕೆ ಮುಂದೂಡಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ
advertisement

ನಿಮ್ಮ ಕಾಮೆಂಟ್ ಬರೆಯಿರಿ