ಹತ್ಯೆಗೂ ಮುನ್ನ ಹರ್ಷನಿಗೆ ಇಬ್ಬರು ಹುಡುಗಿಯರಿಂದ ಕರೆ ಬಂದಿತ್ತಂತೆ..!? ಸ್ನೇಹಿತನಿಂದ ಸ್ಫೋಟಕ ಮಾಹಿತಿ..

posted in: ರಾಜ್ಯ | 0

ಶಿವಮೊಗ್ಗ: ಕೆಲ ದಿನಗಳ ಹಿಂದೆ ಕೊಲೆಯಾದ ಹಿಂದೂ ಸಂಘಟನೆ ಯುವಕ ಹರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತರೊಬ್ಬರು ಕೆಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾನೆ.

ಹರ್ಷನ ಕೊಲೆ ನಡೆದ ದಿನ ಕೊನೆ ಕ್ಷಣದಲ್ಲಿ ನಡೆದ ಸಂಗತಿ ಬಗ್ಗೆ ಸ್ನೇಹಿತ ಬಹಿರಂಗ ಪಡಿಸಿದ್ದು, ಫೆಬ್ರವರಿ 20 ರ ರಾತ್ರಿ 9 ಗಂಟೆಗೆ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಗೂ ಮುನ್ನ ಸಹಾಯ ಕೇಳುವ ನೆಪದಲ್ಲಿ ಇಬ್ಬರು ಅಪರಿಚತ ಹುಡುಗಿಯರಿಂದ ಅವರಿಗೆ ವಿಡಿಯೋ ಕಾಲ್ ಬಂದಿತ್ತು ಎಂಬ ಮಾಹಿತಿಯನ್ನು ಹರ್ಷನ ಜೊತೆ ಇದ್ದ ಸ್ನೇಹಿತರೊಬ್ಬರು ಬಹಿರಂಗಪಡಿಸಿದ್ದಾನೆ.

ಹರ್ಷ ಕೊಲೆಯಾದ ದಿನ ರಾತ್ರಿ ಹರ್ಷನಿಗೆ ವಿಡಿಯೋ ಕಾಲ್ ಬಂದಿತ್ತು. ಆ ವಿಡಿಯೋ ಕಾಲ್​ ಅನ್ನು ಇಬ್ಬರು ಅಪರಿಚಿತ ಹುಡುಗಿಯರು ಮಾಡುತ್ತಿದ್ದರು. ಅಂದು ಸಹ ಸಹಾಯ ಕೇಳುವ ನೆಪದಲ್ಲಿ ಹರ್ಷನಿಗೆ ಫೋನ್​​ ಮಾಡಿ ಮಾತನಾಡಿದ್ದಾರೆ. ನಾವು ನಿಮ್ಮ ಫ್ರೆಂಡ್ ಎಂದು ಹೇಳಿ ಮಾತನಾಡುತ್ತಿದ್ದರು. ಕೊಲೆಯಾಗುವುದಕ್ಕೂ ಮೊದಲು ಕರೆ ಮಾಡಿದ್ದ ಇಬ್ಬರು ಹುಡುಗಿಯರು ನಾವು ನಿಮ್ಮ ಸ್ನೇಹಿತರು . ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ  ಎನ್ನುತ್ತಿದ್ದರು. ಈ ವೇಳೆ ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದಾನೆ. ಅಲ್ಲದೆ ಇವರು ಯಾರೆಂದು ಗೊತ್ತಿಲ್ಲ, ಇವರು ಯಾರು ಎಂದು ಸ್ನೇಹಿತರಿಗೆ ಕೇಳಿದ್ದಾನೆ.  ಅಲ್ಲಿಂದ ಹೋದ ಸ್ವಲ್ಪ ಹೊತ್ತಿನಲ್ಲೇ ಹರ್ಷನ ಕೊಲೆಯಾಗಿತ್ತು ಎಂದು ಸ್ನೇಹಿತ ಹೇಳಿಕೊಂಡಿದ್ದಾನೆ.
ಕೊಲೆಯ ಬಳಿಕ ಹರ್ಷನ ಮೊಬೈಲ್ ನಾಪತ್ತೆಯಾಗಿದೆ ಎನ್ನಲಾಗಿದೆ. ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಂತೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯತ್ತಿದೆ.

ಓದಿರಿ :-   ಭಟ್ಕಳ: ಆಟ ಆಡುತ್ತಿದ್ದಾಗ ಮಳೆ ನೀರಿನ ಕಾಲುವೆಗೆ ಬಿದ್ದು 4 ವರ್ಷದ ಮಗು ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ